Sunday, January 11, 2026

ಕೇವಲ 27 ದಿನಕ್ಕೆ ರಾಜೀನಾಮೆ ಕೊಟ್ಟ ಫ್ರೆಂಚ್ ಪ್ರಧಾನಿ: ಅಷ್ಟಕ್ಕೂ ಆಗಿದ್ದಾದರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

27 ದಿನಗಳ ಹಿಂದೆ ಪ್ರಧಾನಿಯಾಗಿ ನೇಮಿಸಿದ ಫ್ರೆಂಚ್ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಇಂದು ರಾಜೀನಾಮೆ ನೀಡಿದ್ದಾರೆ. ಅವರ ಹೊಸ ಸಂಪುಟ ವಿವಾದಕ್ಕೆ ಕಾರಣವಾದ ನಂತರ ಸೆಬಾಸ್ಟಿಯನ್ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಸೆಬಾಸ್ಟಿಯನ್ ಅವರು ಕಳೆದ 2 ವರ್ಷಗಳಲ್ಲಿ ತಮ್ಮ ಹುದ್ದೆಯನ್ನು ತ್ಯಜಿಸಿದ ಐದನೇ ಫ್ರೆಂಚ್ ಪ್ರಧಾನಿಯಾಗಿದ್ದಾರೆ.

ಮ್ಯಾಕ್ರನ್‌ ಜೊತೆ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ 39 ವರ್ಷದ ಲೆಕೋರ್ನು ಇಂದು ಬೆಳಿಗ್ಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಲೆಕೋರ್ನು ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಬೇರೂ ಸೇರಿದಂತೆ ಹಲವು ಪ್ರಭಾವಿ ರಾಜಕಾರಣಿಗಳನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಂಡಿದ್ದರು. ಇದಾದ ನಂತರ ಬಲಪಂಥೀಯ ಮಿತ್ರಪಕ್ಷಗಳು ತಮ್ಮ ಸರ್ಕಾರದಿಂದ ಹಿಂದೆ ಸರಿಯುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!