ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಏನೆಲ್ಲ ಕಸರತ್ತು ಮಾಡುತ್ತಿದ್ದರೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಸುಧಾರಣೆ ಆಗುತ್ತಿಲ್ಲ. ಇದನ್ನು ಹೇಗಾದ್ರೂ ಮಾಡಿ ಸುಧಾರಣೆ ಮಾಡಬೇಕೆಂದು ಬಳ್ಳಾರಿ ಜಿಲ್ಲಾ ಪಂಚಾಯಿತಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿಗಳ ಗ್ರಂಥಾಲಯಗಳಲ್ಲಿ ಅರಿವು ಕೇಂದ್ರಗಳಲ್ಲಿ ಆನ್ ಲೈನ್ ಸ್ಮಾರ್ಟ್ ಕ್ಲಾಸ್ ಗಳನ್ನು ಆರಂಭಿಸಿದೆ.
ಗ್ರಾಮೀಣ ಭಾಗದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಕಲಿಕೆಯ ಸುಧಾರಣೆಗೆ ಜಿಲ್ಗ್ರಾಲೆಯ 100 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ದಸರೇ ರಜೆಯಲ್ಲಿ ವಿದ್ಯಾರ್ಥಿಗಳಿಗೆ ಈ ಸ್ಮಾರ್ಟ್ ಕ್ಲಾಸ್ ಯೋಜನೆ ರೂಪಿಸಿದೆ.
ಗ್ರಂಥಾಲಯಗಳಲ್ಲಿನ ಟಿವಿ, ಲ್ಯಾಪ್ ಟಾಪ್ ಗಳನ್ನು ಬಳಸಿಕೊಂಡು. ಎಸ್ ಎಸ್ ಎಲ್ ಸಿ ಪಠ್ಯಕ್ರಮವನ್ನು ಈಗಾಗಲೇ ಯೂಟ್ಯೂಬ್ ಗಳಲ್ಲಿ ಭೋದಿಸಿರುವ ಗಣಿತ, ವಿಜ್ಞಾನ ಜೊತೆಗೆ ಇಂಗ್ಲೀಷ್ ವಿಷಯಗಳಿಗೆ ಸಂಬಂಧಿಸಿದ ಉತ್ತಮವಾದುವುಗಳನ್ನು ಆಯ್ದು ಅವುಗಳನ್ನು ಮಾತ್ರ ಪ್ರತಿದಿನ ಮೂರು ತಾಸು ಪ್ರತಿನಿತ್ಯ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಮೂರು ವಿಷಯಗಳ ಬಗ್ಗೆ ಪ್ರದರ್ಶಿಸಲಾಗುತ್ತಿದೆ. ರಜೆ ದಿನಗಳಲ್ಲಿ ಮಕ್ಕಳು ಕಲಿಕೆಯಿಂದ ದೂರ ಆಗಬಾರದೆಂದು ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇದನ್ನು ಆಯೋಜಿಸಿದೆ.
ಎಸ್ಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಹೊಸ ಐಡಿಯಾ: ಬಳ್ಳಾರಿ ಜಿಪಂನಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಂಥಾಲಯಗಳಲ್ಲಿ ಸ್ಮಾರ್ಟ್ ಕ್ಲಾಸ್!
