ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಥವಾ ಡಿ.ಕೆ.ಶಿವಕುಮಾರ್ ಅವರ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಗುಂಡಿ ಮುಚ್ಚುವ ಡೆಡ್‌ಲೈನ್ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ಕೇಳಿ ಎಂದಿದ್ದು ಸಿಎಂ ಅವರ ಬೇಜವಾಬ್ದಾರಿ ಹೇಳಿಕೆ ಎಂಬುದು ನನ್ನ ಅಭಿಪ್ರಾಯ. ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವ್ರಾ? ಅಥವಾ ಶಿವಕುಮಾರ್ ಅವ್ರಾ? ಮುಖ್ಯಮಂತ್ರಿಗಳ ಸಭೆ ಮಾಡಿ ಒಂದು ಡೆಡ್‌ಲೈನ್ ಕೊಟ್ರು. ಗುಂಡಿ ಮುಚ್ಚಲು ಕಾಲದ ಗಡುವು ಕೊಟ್ಟು ಮುಚ್ಚಿಲ್ಲ. ಮುಖ್ಯಮಂತ್ರಿ ಮಾತಿಗೂ ಸಹ ಎಷ್ಟು ಬೆಲೆ ಅಧಿಕಾರಿಗಳು ಕೋಡ್ತಾ ಇದ್ದಾರೆ ಗೊತ್ತಾಗ್ತಿದೆ. ರಾಜ್ಯದ ಸಿಎಂ ಆಗಿ ನಿರ್ವಹಣೆ ಮಾಡೋಕೆ ಅಸಮರ್ಥರಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ರಾಜ್ಯದ ಸಿಎಂ ಸಿದ್ದರಾಮಯ್ಯ ಅಥವಾ ಶಿವಕುಮಾರ್? ಎಚ್‌ಡಿಕೆಗೆ ಈ ಡೌಟ್ ಯಾಕೆ?

