Monday, January 12, 2026

ಮಂಗಳೂರಿನಲ್ಲಿ ಹಿಂದು ರಾಷ್ಟ್ರ ಸಮನ್ವಯ ಸಮಿತಿಗೆ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಮಾತೃ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ೨೫ಕ್ಕೂ ಹೆಚ್ಚು ಹಿಂದು ಮುಖಂಡರು ಪಾಲ್ಗೊಂಡು, ಎಲ್ಲಾ ಸಂಘಟನೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಬಗ್ಗೆ ಚರ್ಚೆ ನಡೆಸಿದರು.

ದಿನೇ ದಿನೇ ಹಿಂದುಗಳ ಮೇಲಿನ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಶಿವಮೊಗ್ಗದಲ್ಲಿ ಹಿಂದು ಎನ್ನುವ ಕಾರಣಕ್ಕಾಗಿ ಮತಾಂಧರು ಆತನಿಗೆ ಥಳಿಸಿದರು. ಕಾರ್ಕಳದಲ್ಲಿ ಹಿಂದು ವಿದ್ಯಾರ್ಥಿಗೆ ಜನಿವಾರ ತೆಗೆಸಿದ್ದು, ಈ ರೀತಿಯ ಅನೇಕ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಹಾಗಾಗಿ, ಇಂತಹ ಘಟನೆಗಳಾದಾಗ ಒಂದೊಂದೇ ಸಂಘಟನೆಗಳು ಹೋರಾಟ ಮಾಡದೆ, ಎಲ್ಲಾ ಹಿಂದು ಸಂಘಟನೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಚರ್ಚಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ದೇಶಾದ್ಯಂತದ ಹಿಂದುಗಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಹಿಂದು ಸಂಘಟನೆಗಳು ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ತರುವಂತಹ ಬಲಿಷ್ಠ ಪ್ರಭಾವಿ ತಂಡದ ನಿರ್ಮಾಣವು ಅನಿವಾರ್ಯವಾಗಿದೆ. ಎಲ್ಲ ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯವನ್ನು ಮಾಡುತ್ತಿವೆ. ಆದರೆ, ಅವಶ್ಯಕತೆಗನುಸಾರ ಕೆಲವು ಸಂದರ್ಭಗಳಲ್ಲಿ ಎಲ್ಲ ಸಂಘಟನೆಗಳು ಒಟ್ಟಾಗಿ ಆಂದೋಲನ ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಎಲ್ಲ ಸಂಘಟನೆಗಳು ‘ಹಿಂದು ರಾಷ್ಟ್ರ ಸಮನ್ವಯ ಸಮಿತಿ’ಯ ಅಡಿಯಲ್ಲಿ ಒಂದಾಗಲು ನಿರ್ಧರಿಸಲಾಯಿತು. ಅಲ್ಲದೆ, ಸರ್ಕಾರದ ಜೊತೆ ಹಿಂದೂಗಳ ಬೇಡಿಕೆಗಳನ್ನು ಸಮನ್ವಯಗೊಳಿಸಲು ಈ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯರಾಧಾಕೃಷ್ಣ ಅಡ್ಯಂತಾಯ, ಸಂಸ್ಕಾರ ಭಾರತಿ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ, ಹಿಂದೂ ಯುವ ಸೇನೆಯ ಜನಾರ್ಧನ ಆರ್ಕುಲ, ಹಿಂದೂ ಸೇವಾ ಸಮಿತಿಯಸುರೇಂದ್ರ ಮತ್ತು ಯೋಗೀಶ್, ಬಜರಂಗದಳದ ಮಿಥುನ್ ಪೂಜಾರಿ, ಹಿಂದೂ ಮಹಾಸಭಾದ ಎಲ್ ಕೆ ಸುವರ್ಣ ಮತ್ತು ರಾಜೇಶ್ ಪವಿತ್ರನ್, ಉದ್ಯಮಿಗಳಾದ ಸತೀಶ್ ಶೆಟ್ಟಿ,ಎಂ. ಜೆ. ಶೆಟ್ಟಿ,ಪ್ರಶಾಂತ್ ಕಂಚನ್ ಇನ್ನಿತರರು ಉಪಸ್ಥಿತರಿದ್ದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!