ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ವಿವಾದ ಸೃಷ್ಟಿಯಾಗಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿಗೆ ಶಿಲಾನ್ಯಾಸ ನೆರವೇರಿಸಿರುವ ಉಚ್ಛಾಟಿತ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯುನ್ ಕಬೀರ್, “ಮಸೀದಿ ನಿರ್ಮಾಣವು ಅಸಂವಿಧಾನಿಕ ಕ್ರಮವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ರೆಜಿನಗರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಪೂಜಾಸ್ಥಳಗಳನ್ನು ನಿರ್ಮಿಸುವುದು ಸಂವಿಧಾನ ನೀಡಿದ ಹಕ್ಕು ಎಂದು ಹೇಳಿದ್ದಾರೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸದಿಂದ ಮುಸ್ಲಿಂ ಸಮುದಾಯಕ್ಕೆ ಆಳವಾದ ನೋವು ಉಂಟಾಗಿದೆ ಎಂದು ಹೇಳಿದ ಕಬೀರ್, 33 ವರ್ಷಗಳ ಹಳೆಯ ಗಾಯಕ್ಕೆ ಇದೊಂದು ಮುಲಾಮು ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಸುಮಾರು 40 ಕೋಟಿ ಮುಸ್ಲಿಮರು ಇದ್ದು, ಪಶ್ಚಿಮ ಬಂಗಾಳದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಮುಸ್ಲಿಮರು ವಾಸವಿದ್ದಾರೆ. ಅಂಥ ಪರಿಸ್ಥಿತಿಯಲ್ಲಿ ಒಂದೇ ಒಂದು ಮಸೀದಿ ನಿರ್ಮಾಣಕ್ಕೂ ವಿರೋಧವಾಗುತ್ತಿರುವುದು ದುರಂತ ಎಂದರು.

