Monday, October 20, 2025

Food | ಒಂದೇ ರೀತಿ ಸ್ನಾಕ್ಸ್ ತಿಂದು ಬೇಜಾರಾಗಿದ್ಯಾ? ಹಾಗಿದ್ರೆ ಕಾರ್ನ್‌ ಪಕೋಡಾ ಟ್ರೈ ಮಾಡಿ

ಬೇಕಾಗುವ ಸಾಮಗ್ರಿಗಳು
* 2 ಕಪ್ ಬೇಬಿ ಕಾರ್ನ್ ಅಥವಾ ಕಾರ್ನ್ ಕಾಳುಗಳು
* 1/2 ಕಪ್ ಕಡಲೆ ಹಿಟ್ಟು
* 1/4 ಕಪ್ ಅಕ್ಕಿ ಹಿಟ್ಟು
* 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* 1/2 ಚಮಚ ಅಚ್ಚ ಖಾರದ ಪುಡಿ
* 1/2 ಚಮಚ ಜೀರಿಗೆ ಪುಡಿ
* 1/4 ಚಮಚ ಅರಿಶಿನ ಪುಡಿ
* 1/4 ಚಮಚ ಗರಂ ಮಸಾಲ
* ರುಚಿಗೆ ತಕ್ಕಷ್ಟು ಉಪ್ಪು
* ಸಣ್ಣಗೆ ಕತ್ತರಿಸಿದ ಈರುಳ್ಳಿ
* ಎಣ್ಣೆ
* ಕತ್ತರಿಸಿದ ಕೊತ್ತಂಬರಿ ಸೊಪ್ಪು

ಕಾರ್ನ್ ಪಕೋಡಾ ಮಾಡುವ ವಿಧಾನ

ಮೊದಲಿಗೆ ಕಾರ್ನ್ ಕಾಳುಗಳನ್ನು ಸ್ವಲ್ಪ ಉಪ್ಪು ಹಾಕಿ 5 ನಿಮಿಷಗಳ ಕಾಲ ಬೇಯಿಸಿ. ನಂತರ ಅದನ್ನು ತಣ್ಣಗಾಗಲು ಬಿಡಿ. ನಂತರ, ಬೇಯಿಸಿದ ಕಾರ್ನ್ ಕಾಳುಗಳಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ಉಪ್ಪು, ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ನೀರು ಹಾಕಿ ದಪ್ಪಗಿನ ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಹೆಚ್ಚು ತೆಳ್ಳಗೆ ಮಾಡಬೇಡಿ. ಕೈಗೆ ಅಂಟಿಕೊಂಡರೆ ಸ್ವಲ್ಪ ನೀರು ಸೇರಿಸಿ.

ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿ ಎಣ್ಣೆಗೆ ತಯಾರಿಸಿದ ಮಿಶ್ರಣವನ್ನು ಸ್ವಲ್ಪ-ಸ್ವಲ್ಪವಾಗಿ ಹಾಕಿ. ಮಧ್ಯಮ ಉರಿಯಲ್ಲಿ ಇದನ್ನು ಕಂದು ಬಣ್ಣಕ್ಕೆ ಬರುವವರೆಗೆ ಕರಿಯಿರಿ. ಅದನ್ನು ಟಿಶ್ಯೂ ಪೇಪರ್ ಮೇಲೆ ಇಡಿ. ಹೆಚ್ಚುವರಿ ಎಣ್ಣೆಯು ಹೀರಿಕೊಳ್ಳುತ್ತದೆ.
ಈಗ ಬಿಸಿಬಿಸಿಯಾದ ಕಾರ್ನ್ ಪಕೋಡಾ ಸವಿಯಲು ಸಿದ್ಧ. ಇದನ್ನು ಪುದೀನಾ ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಸವಿಯಬಹುದು.

error: Content is protected !!