Thursday, January 1, 2026

ಹಿಮಾಚಲ ಪ್ರದೇಶ ಪೊಲೀಸ್‌ ಠಾಣೆಯ ಬಳಿ ಭಾರೀ ಸ್ಫೋಟ: ಕಿಟಕಿ ಗಾಜುಗಳು ಪುಡಿಪುಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ನಲಗಢದಲ್ಲಿರುವ ಪೊಲೀಸ್ ಠಾಣೆಯ ಕೇವಲ ನೂರು ಮೀಟರ್‌ ದೂರ ಪ್ರಬಲ (Blast) ಸ್ಫೋಟ ಸಂಭವಿಸಿದೆ.

ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಮತ್ತು ಸ್ಫೋಟದ ಕಾರಣವನ್ನು ಗುರುತಿಸಲು ತನಿಖೆ ಪ್ರಾರಂಭಿಸಲಾಗಿದೆ.
ವರದಿಯ ಪ್ರಕಾರ, ಪೊಲೀಸ್ ಠಾಣೆ ಬಳಿಯ ಲೇನ್‌ನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮವು ಹತ್ತಿರದ ಕಟ್ಟಡಗಳ ಕಿಟಕಿಗಳು ಪುಡಿಪುಡಿಯಾಗಿವೆ. ಸ್ಫೋಟದ ದೊಡ್ಡ ಶಬ್ದ 400 ರಿಂದ 500 ಮೀಟರ್‌ಗಳವರೆಗೆ ಕೇಳಿಬಂದಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಸ್ಫೋಟದ ನಂತರ ಹಿಮಾಚಲ ಪ್ರದೇಶ ಪೊಲೀಸರು ಕಾರ್ಯಪ್ರವೃತ್ತರಾದರು ಮತ್ತು ಸ್ಫೋಟದ ಕುರಿತು ಹೆಚ್ಚಿನ ತನಿಖೆಗಾಗಿ ಪ್ರದೇಶವನ್ನು ಬ್ಯಾರಿಕೇಡ್‌ ಹಾಕಲಾಗಿದೆ. ತನಿಖೆಗಾಗಿ ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!