Sunday, January 11, 2026

ವರ್ಷಾಂತ್ಯಕ್ಕೆ ಪ್ರವಾಸಿಗರ ದಂಡು: ಕಟೀಲು ಶ್ರೀ ಕ್ಷೇತ್ರದ ಆದಾಯ ಹೆಚ್ಚಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ 202425ರ ಸಾಲಿನಲ್ಲಿ 36,24,791,35 ರೂಪಾಯಿ ಆದಾಯ ದಾಖಲಿಸಿದೆ.

ಕಳೆದ ವರ್ಷ ಅಂದರೆ 2023-24ರಲ್ಲಿ ಆದಾಯ 32.53 ಕೋಟಿ ಆಗಿದ್ದು, ಈ ವರ್ಷ ಮೂರೂವರೆ ಕೋಟಿ ರೂಪಾಯಿಯಷ್ಟು ಆದಾಯ ಹೆಚ್ಚಾಗಿದೆ.

ವಿವಿಧ ಸೇವೆಗಳಿಂದ 12 ಕೋಟಿ, ಕೋಣೆ ಬಾಡಿಗೆಯಿಂದ 70 ಲಕ್ಷ, ಕಟ್ಟಡ ಬಾಡಿಗೆಯಿಂದ 44 ಲಕ್ಷ, ಅನ್ನದಾನ, ವಿದ್ಯಾದಾನ ಕಾಣಿಕೆ ಮತ್ತು ಹುಂಡಿಯಿಂದ 6 ಕೋಟಿ, ಕಾಣಿಕೆ ಹುಂಡಿಯಿಂದ 6.30 ಕೋಟಿ, ಇ-ಹುಂಡಿಯಿಂದ 24 ಲಕ್ಷ, ಯಕ್ಷಗಾನ ಮೇಳದ ಕಾಣಿಕೆ, ತತ್ಕಾಲ್, ನೋಂದಣಿ, ಹುಂಡಿಗಳಿಂದ 1.83 ಕೋಟಿ, ಶೀಘ್ರ ದರ್ಶನದಿಂದ 14 ಲಕ್ಷ, ಶೇಷ ವಸ್ತ್ರ ಮಾರಾಟದಿಂದ 1.62 ಕೋಟಿ, ಚಿನ್ನದ ರಥೋತ್ಸವ ಕಾಣಿಕೆಯಿಂದ 6.40 ಲಕ್ಷ, ಹಣ್ಣುಕಾಯಿ ಕೌಂಟರ್, ಸೀರೆ ಫೋಟೊ ಕೌಂಟರ್ ಹಾಗೂ ನಂದಿನಿ ಮಿಲ್ಕ್ ಪಾರ್ಲರ್ ಸಾಮಾಗ್ರಿ ಮಾರಾಟದಿಂದ 82 ಲಕ್ಷ, ನಿರಖು ಠೇವಣಿಯ ಬಡ್ಡಿಯಿಂದ 3.70 ಕೋಟಿ ರೂಪಾಯಿ ಆದಾಯ ಬಂದಿದೆ.

ನೌಕರರ ವೇತನಕ್ಕೆ 3.35 ಕೋಟಿ, ಭದ್ರತಾ ಸಿಬಂದಿಗಳ ವೇತನಕ್ಕೆ 1 ಕೋಟಿ, ಹೌಸ್ ಕೀಪಿಂಗ್ ನೌಕರರ ವೇತನ 39 ಲಕ್ಷ, ಸೇವಾ ಬಟವಾಡೆ 1.15 ಕೋಟಿ, ಬೆಳಕು ವ್ಯವಸ್ಥೆ 48 ಲಕ್ಷ, ಅಂಚೆ, ಸೇವಾ ಆರಾಧನೆಗೆ 4.27 ಕೋಟಿ, ಅನ್ನದಾನಕ್ಕೆ 5.41 ಕೋಟಿ, ಶಾಲಾ ಮಕ್ಕಳ ಬಿಸಿಯೂಟಕ್ಕೆ 8 ಲಕ್ಷ, ಉತ್ಸವಕ್ಕೆ 1.12ಕೋಟಿ, ಜಾನುವಾರು ಆನೆ ಸಾಕಾಣೆಗೆ 1 ಕೋಟಿ, ಅನ್ನಪೂರ್ಣ ಶಾಲೆಯ ಹಿಂಬದಿಗೆ ತಡೆಗೋಡೆ ನಿರ್ಮಾಣಕ್ಕೆ 50 ಲಕ್ಷ, ನಂದಿನಿ ವಸತಿಗೃಹ ಹಿಂಭಾಗದ ರಸ್ತೆಗೆ ಕಾಂಕ್ರೀಟೀಕರಣಕ್ಕೆ 70ಲಕ್ಷ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗೆ 1.33 ಕೋಟಿ, ಪದವೀಪೂರ್ವಕಾಲೇಜಿಗೆ 2.85 ಕೋಟಿ, ಪ್ರಥಮ ದರ್ಜೆ ಕಾಲೇಜಿಗೆ 4.16 ಕೋಟಿ, ವಿದ್ಯಾಸಂಸ್ಥೆಗಳ ನಿವೃತ್ತ ಖಾಯಂ ಸಿಬಂದಿಗಳಿಗೆ ಉಪಧನ ಪಾವತಿಯನ್ನು ಎಲ್‌ಐಸಿಯಲ್ಲಿ ಡಿಪಾಸಿಟ್‌ಗೆ 50 ಲಕ್ಷ, ಆಡಿಟ್‌ಗೆ 50 ಲಕ್ಷ ಹೀಗೆ 32.29 ಕೋಟಿ ರೂಪಾಯಿ ಖರ್ಚು ಆಗಿದೆ.

ಮುಜರಾಯಿ ದೇವಾಲಯಗಳ ಈ ವರುಷದ ಆದಾಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡಿ ಬೆಟ್ಟ ಮೊದಲ ಮೂರು ಸ್ಥಾನಗಳಲ್ಲಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!