ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಆಡಳಿತ ಮಂಗಳವಾರದಿಂದ ಚಾಲನೆಗೆ ಬರುತ್ತಿದ್ದು, ಬಿಬಿಎಂಪಿ (BBMP) ಎಂಬ ಪದ ಬಳಕೆ ಇನ್ನು ಇತಿಹಾಸದ ಪುಟ ಸೇರಲಿದೆ.
ರಾಜ್ಯ ಸರ್ಕಾರ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ವಿಂಗಡಿಸಿ ಆಡಳಿತಕ್ಕೆ ಅನುಕೂಲಕ ವಾತಾವರಣ ನಿರ್ಮಾಣ ಮಾಡಲಾಗಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಕಚೇರಿ ನಾಫಮಲಕವೂ ಬದಲಾಗಿದೆ. ಇದೀಗ ಬಿಬಿಎಂಪಿ ಕಚೇರಿಯ ನಾಮಫಲಕವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ಬದಲಾಯಿಸಲಾಗಿದೆ.
ಇಂದಿನಿಂದ ಜಿಬಿಎ ಆಡಳಿತ ಜಾರಿ ಹಿನ್ನೆಲೆಯಲ್ಲಿ ಬಿಬಿಎಂಪಿ ನಾಮಫಲಕ ಬದಲಾವಣೆ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದಿದ್ದ ನಾಮಫಲಕ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ಬದಲಾವಣೆಯಾಗಿದೆ.
ಗ್ರೇಟರ್ ಬೆಂಗಳೂರು ಕುರಿತು ಡಿಕೆ ಶಿವಕುಮಾರ್ ಪ್ರತ್ರಿಕ್ರಿಯೆ
ಕ್ಷೇತ್ರ ಡೈವರ್ಟ್ ಬಗ್ಗೆ ಬಿಜೆಪಿ ಶಾಸಕರ ಅಪಸ್ವರ ವಿಚಾರದ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮ್ಮನೆ ನನ್ನನ್ನು ಬೈಯೋಕೆ ಮಾತನಾಡಿರಬಹುದು. ಆದರೆ ಎಲ್ಲಾ ಶಾಸಕರು ಬಹಳ ಸಂತಸದಿಂದ ಇದ್ದಾರೆ. ಯಾರಿಗೂ ಯಾವುದೇ ಅಸಮಾಧಾನ ಇಲ್ಲ. ನಿಮ್ಮ ಮುಂದೆ ಬೇಕಂತಲೇ ಬೇಸರ ಹೊರಹಾಕಬಹುದು ಎಂದು ಹೇಳಿದ್ದಾರೆ.