Saturday, March 25, 2023

Latest Posts

ದಿನಭವಿಷ್ಯ : ಇಂದು ದೇಹಕ್ಕೆ ಆಯಾಸ ಇಲ್ಲ, ಬರೀ ಮನಸ್ಸಿಗಷ್ಟೇ!

ಶನಿವಾರ, 4 ಮಾರ್ಚ್2023, ಮಂಗಳೂರು

ಮೇಷ
ನೀವಿಂದು ಮಿಶ್ರಭಾವ ಅನುಭವಿಸುವಿರಿ. ಸಾಧ್ಯವಾದಷ್ಟು ಕುಶಿಯಾಗಿರಲು ಪ್ರಯತ್ನಿಸಿ. ನೆಗೆಟಿವ್ ಚಿಂತನೆಯನ್ನು ಹೊಡೆದೋಡಿಸಿ.

ವೃಷಭ
ಇಂದು ಸಂಕಷ್ಟಗಳು ಪರಿಹಾರ ಕಾಣುತ್ತವೆ. ಇದರಿಂದ ಮನಸ್ಸಿಗೆ ನಿರಾಳತೆ. ಉದ್ಯೋಗದಲ್ಲಿ ಅನಿರೀಕ್ಷಿತ ಸಹಕಾರ ಪಡೆಯುವಿರಿ.

ಮಿಥುನ
ಕೆಲವು ಕೌಟುಂಬಿಕ ಕಿರಿಕಿರಿಗಳು ಮನಸ್ಸಿನ ನೆಮ್ಮದಿ ಕಲಕಬಹುದು. ವೃತ್ತಿಯಲ್ಲೂ ಪ್ರತಿಕೂಲ ಪರಿಣಾಮ ಎದುರಿಸುವಿರಿ.  ಧ್ಯಾನ ಸಹಕಾರಿ.

ಕಟಕ
ವ್ಯಕ್ತಿಗತ ಬದುಕಿನಲ್ಲಿ ಏರಿಳಿತ ಅನುಭವಿಸುವಿರಿ. ವ್ಯಕ್ತಿಯೊಬ್ಬರ ಕುರಿತು ಭಾವತೀವ್ರತೆ. ನೋವು ನಲಿವುಗಳ ಮಿಶ್ರಭಾವ. ಸಹನೆ ಕಾಯ್ದುಕೊಳ್ಳಿ.

ಸಿಂಹ
ಆಪ್ತರೊಂದಿಗೆ ಕಳೆಯುವ ಕಾಲವು ನಿಮ್ಮ ಮನಸ್ಸಿನ ಒತ್ತಡ ಕಡಿಮೆ ಮಾಡುವುದು. ಆದರೆ ಸಮಸ್ಯೆಯ ಪರಿಹಾರಕ್ಕೆ ಇನ್ನಷ್ಟು ಪರಿಶ್ರಮ ಅವಶ್ಯ.

ಕನ್ಯಾ
ಬೇಡವೆಂದರೂ ನೆಗೆಟಿವ್ ಚಿಂತನೆಗಳು ಮನಸ್ಸನ್ನು ಆವರಿಸುತ್ತವೆ. ಇದು ನಿಮ್ಮ ದೈನಂದಿನ ಕೆಲಸದ ಮೇಲು ಪರಿಣಾಮ ಬೀರಬಹುದು.

ತುಲಾ
ಆತ್ಮೀಯರೊಂದಿಗೆ ಸಂಘರ್ಷ ಉಂಟಾದೀತು. ಇದರಿಂದ ನೆಮ್ಮದಿ ಕಳಕೊಳ್ಳುವಿರಿ. ಕೋಪದ ಕೈಗೆ ಬುದ್ಧಿ ಕೊಡಬೇಡಿ.

ವೃಶ್ಚಿಕ
ದೇಹಕ್ಕಿಂತಲೂ ಮನಸ್ಸಿಗೆ ಹೆಚ್ಚು ಆಯಾಸ ಅನುಭವಿಸುವಿರಿ. ಅದಕ್ಕೆ ಕಾರಣ ನಿಮಗೆ ಹಿತವಲ್ಲದ ಬೆಳವಣಿಗೆ ಸಂಭವಿಸುವುದು. ಉದ್ವಿಗ್ನತೆ ಹೆಚ್ಚಳ.

ಧನು
ನಿಮ್ಮ ಹಿಂದಿನ ಪ್ರಯತ್ನಕ್ಕೆ ಪ್ರತಿಫಲ ದೊರಕುವುದು. ಮುನಿಸಿಕೊಂಡವರು ಹತ್ತಿರವಾಗುವರು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶ.

ಮಕರ
ತಾಳ್ಮೆಯಿಂದ ವ್ಯವಹರಿಸಿದರೆ ನಿಮಗಿಂದು ಎಲ್ಲ ಸುಗಮವಾಗಲಿದೆ. ತಾಳ್ಮೆ ತಪ್ಪಿದರೆ ಮಾತ್ರ ಬಿಕ್ಕಟ್ಟಿಗೆ ಸಿಲುಕುವಿರಿ. ಜಗಳ ಆಗಬಹುದು.

ಕುಂಭ
ನಿಮ್ಮ ಗುರಿಗೆ ಅಡ್ಡ ಬರುವ ವ್ಯಕ್ತಿಗಳಿಂದ ದೂರವಿರಿ. ಅವರ ನಯಮಾತುಗಳಿಗೆ ಮರುಳಾಗದಿರಿ. ಹಣಕಾಸು ಪರಿಸ್ಥಿತಿ ಸುಧಾರಣೆ.

ಮೀನ
ಆಪ್ತರೊಂದಿಗೆ ಆತ್ಮೀಯ ಕಾಲಕ್ಷೇಪ. ಮನೆಯಲ್ಲಿ ಮೂಡಿದ್ದ ಆತಂಕದ ಪರಿಸ್ಥಿತಿ ನಿವಾರಣೆ. ಆರೋಗ್ಯ ಸುಧಾರಣೆ. ಖರ್ಚು ಹೆಚ್ಚಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!