ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಹೊಸ ವರ್ಷಾಚರಣೆಯನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಪ್ರತೀ ವರ್ಷದಂತೆ ಈ ಬಾರಿಯೂ ಹೊಸ ವರ್ಷಾಚರಣೆಗೆ ಪೊಲೀಸರು ಮಾರ್ಗಸೂಚಿ ನೀಡಿದ್ದಾರೆ.
ಏನಿದೆ ಮಾರ್ಗಸೂಚಿಯಲ್ಲಿ?
ಬಾರ್ ಹಾಗೂ ಪಬ್‌ಗಳಲ್ಲಿ ಸಿಟಿಟಿವಿ ಕಡ್ಡಾಯವಾಗಿದೆ, ಅನುಮತಿ ಇಲ್ಲದೆ ಸೇವೆ ನೀಡಿದಲ್ಲಿ ಕಾನೂನು ಕ್ರಮ, ಪಬ್ ಹಾಗೂ ಬಾರ್‌ಗಳಲ್ಲಿ ಅನುಮತಿಗಿಂತ ಹೆಚ್ಚು ಮಂದಿಯನ್ನು ಸೇರಿಸುವಂತಿಲ್ಲ. ಮಹಿಳೆಯರ ಸುರಕ್ಷತೆ ಬಗ್ಗೆ ಪ್ರತಿಯೊಂದು ಕಡೆಯೂ ಎಚ್ಚರ ಅಗತ್ಯ.
ಫೈರ್ ಹಾಗೂ ಸೇಫ್ಟಿ ಡಿಪಾರ್ಟ್‌ಮೆಂಟ್‌ನ ಪರ್ಮಿಷನ್ ಇಲ್ಲದಿದ್ದರೆ ಬಾರ್,ಪಬ್ ಓಪನ್ ಮಾಡುವಂತಿಲ್ಲ. ಬಾರ್ ಪಬ್‌ಗಳಲ್ಲಿ ಜನ ಹೆಚ್ಚಾಗಿ ಏನೇ ಅನಾಹುತ ಸಂಭವಿಸಿದರೂ ಜಾಗದ ಮಾಲೀಕರೇ ಹೊಣೆ

