Wednesday, November 5, 2025

ಮಳೆ ಕಡಿಮೆ ಆಯ್ತು ಅನ್ಕೋಬೇಡಿ! ನಾಳೆಯಿಂದ ಮೂರು ದಿನಗಳ ಕಾಲ ಶುರುವಾಗಲಿದೆ ವರುಣನ ಆರ್ಭಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವಾರದಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿದಿದ್ದರೂ, ಈಗ ಮತ್ತೆ ವರುಣ ಕೃಪೆ ತೋರಿದ್ದಾನೆ. ಸೈಕ್ಲೋನ್ ಪರಿಣಾಮದಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯಗಳ ತೀವ್ರತೆ ಹೆಚ್ಚಾಗಿದ್ದು, ಹವಾಮಾನ ಇಲಾಖೆ ಹೊಸ ಎಚ್ಚರಿಕೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಕರ್ನಾಟಕದ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಕಳೆದ ಒಂದು ವಾರದ ವಿಶ್ರಾಂತಿಯ ನಂತರ, ನಾಳೆಯಿಂದ ಮತ್ತೆ ಮಳೆ ಸುರಿಯಲಿದೆ. ಹವಾಮಾನ ಇಲಾಖೆಯ ಪ್ರಕಾರ, ನವೆಂಬರ್ 5 ರಿಂದ 7 ರವರೆಗೆ ಗಾಳಿ ಸಹಿತ ಭಾರೀ ಮಳೆಯಾಗಲಿದೆ. ಸೈಕ್ಲೋನ್ ಎಫೆಕ್ಟ್‌ನಿಂದಾಗಿ ಕೆಲವೆಡೆ ತೀವ್ರ ಮಳೆಯ ಸಂಭವವೂ ಇದೆ ಎನ್ನಲಾಗಿದೆ.

ಮಳೆ ಮತ್ತು ಬಲವಾದ ಗಾಳಿ ಹಿನ್ನೆಲೆ ನಾಳೆ ಬೀದರ್‌, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚು ಇರಬಹುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ನವೆಂಬರ್ 5 ಹಾಗೂ 6 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ಎಲ್ಲೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ.

error: Content is protected !!