Monday, November 10, 2025

FAO ಸ್ಥಾಪನೆ ದಿನವನ್ನು ವಿಶ್ವ ಆಹಾರ ದಿನಾಚರಣೆಯಾಗಿ ಆಚರಣೆ: ಸಿಎಂ ಸಿದ್ದರಾಮಯ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

FAO ಸ್ಥಾಪನೆ ದಿನವನ್ನು ವಿಶ್ವ ಆಹಾರ ದಿನಾಚರಣೆ ಮಾಡುತ್ತೇವೆ ಎಂದು ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿನ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಳಿ, ನೀರು, ಮಣ್ಣು ಸೇವಿಸಿ ಬದುಕೋಕೆ ಆಗುತ್ತಾ? ಮನುಷ್ಯ ಬದುಕಲು ಆಹಾರ ಸೇವನೆ ಮುಖ್ಯ. ಕಾರ್ಪೊರೇಟ್ ಕಂಪನಿಗಳಿಂದ ಸಣ್ಣ ರೈತರಿಗೆ ಸಮಸ್ಯೆ ಆಗುತ್ತದೆ ಪ್ರಸಕ್ತ ದಿನಗಳಲ್ಲಿ ರೈತರ ರಕ್ಷಣೆ ಕೂಡ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇನ್ನೊಬ್ಬರ ಮನೆ ಮುಂದೆ ಆಹಾರಕ್ಕೆ ಕೈಚಾಚಬಾರದು ಎಂದು ಉಚಿತ ಅಕ್ಕಿ ವಿತರಿಸಲಾಗುತ್ತಿದೆ. ನಾವೆಲ್ಲ ಮುದ್ದೆ ತಿನ್ನುತ್ತಿದ್ವಿ. ನೆಂಟರು ಬಂದಾಗ ಮಾತ್ರ ಅನ್ನ ತಿಂತಾ ಇದ್ದೆವು. ಉತ್ತರ ಕರ್ನಾಟಕ ಭಾಗದಲ್ಲಿ ಜೋಳದ ರೊಟ್ಟಿ ಮತ್ತು ಚಪಾತಿ ತಿನ್ನುತ್ತಿದ್ದರು. ನಮ್ಮಜ್ಜಿ ಹೊಟ್ಟೆ ತುಂಬಾ ಹಿಟ್ಟು, ಬಾಯಿ ತುಂಬಾ ಅನ್ನ ತಿನ್ನುತ್ತಿದ್ದರು. ನಮ್ಮ ಅಮ್ಮನ ಬಳಿ ಬಂದು ತುತ್ತು ಅನ್ನಕ್ಕಾಗಿ ಕಾಯುತ್ತಿದ್ದರು. ಇದಕ್ಕಾಗಿ ನಾನು ಸಿಎಂ ಆದ ಮೇಲೆ 1 ರೂಪಾಯಿಗೆ ಅಕ್ಕಿ ಕೊಟ್ಟೆ. 2013ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಉಚಿತ ಅಕ್ಕಿ ಕೊಟ್ಟೆ. ಇವತ್ತು ಯಾರು ಅನ್ನ ಇಲ್ಲದೆ ಮಲಗಬಾರದು ಎನ್ನುವ ಉದ್ದೇಶದಿಂದ ಎಲ್ಲರಿಗೂ ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿದೆ ಎಂದು ವಿಶ್ವ ಸಿದ್ದರಾಮಯ್ಯ ತಿಳಿಸಿದರು.

error: Content is protected !!