ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಕರ್ನಾಟಕ, ಕರಾವಳಿ, ಹಳೆ ಮೈಸೂರು ಸೇರಿದಂತೆ ರಾಜ್ಯದ 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿಯಾಗಿದ್ದು ಅದರಲ್ಲೂ 12 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ, ಬೆಂಗಳೂರು ನಗರ,ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ,ಕೊಡಗು,ತುಮಕೂರು, ಕೋಲಾರ,ಮೈಸೂರು, ರಾಮನಗರ ಸೇರಿ 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ.ಅಕ್ಟೋಬರ್ 15 ರವರೆಗೆ ಈ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ಬೆಂಗಳೂರು ನಗರ ಎಚ್ ಎಎಲ್ ಭಾಗದಲ್ಲಿ 29.2 ಮಿಮೀ ಮಳೆಯಾದರೆ ಒಟ್ಟಾರೆ ಬೆಂಗಳೂರು ನಗರದಲ್ಲಿ 7.8 ಮಿ.ಮೀ ಮಳೆ ಬಿದ್ದಿದೆ.
ಚಿತ್ರದುರ್ಗದ ಕೈನಾಡಿನಲ್ಲಿ ಅತಿಹೆಚ್ಚು 175 ಮಿ.ಮೀ., ರಾಮನಗರದಲ್ಲಿ 49.5 ಮಿ.ಮೀ, ಮಂಡ್ಯದ ಕೆಸ್ತೂರಲ್ಲಿ 154.5 ಮಿಮೀ ಮಳೆ ದಾಖಲಾಗಿದೆ.