ದಿನಭವಿಷ್ಯ: ನಿಮ್ಮ ಬಾಹ್ಯ ಸೌಂದರ್ಯಕ್ಕೆ ಕೂಡಾ ಗಮನ ಕೊಡಿ, ಇತರರನ್ನು ಮೆಚ್ಚಿಸಲು ಅದೂ ಅಗತ್ಯ

ಮೇಷ
ಗುರಿ ಸಾಧನೆಯಲ್ಲಿ ಇಂದು ಹೆಚ್ಚು ಅಚಲವಾಗಿ, ದೃಢವಾಗಿ ವ್ಯವಹರಿಸುವಿರಿ. ರೋಷಾವೇಶದ ಮಾತೂ ಬಂದೀತು. ಸಂಯಮ ಒಳ್ಳೆಯದು.

ವೃಷಭ
ಇತರರನ್ನು ನಿಮ್ಮ ಚಿಂತನೆಗೆ ತಕ್ಕಂತೆ ಬದಲಿಸಲು ಸಫಲರಾಗುವಿರಿ. ಅವರಿಂದ ನಿಮಗೆ ಬೇಕಾದ ಕಾರ್ಯ ಸಾಧಿಸಲೂ ಶಕ್ತರಾಗುವಿರಿ.

ಮಿಥುನ
ನಿಮ್ಮ ಖಾಸಗಿ ವ್ಯವಹಾರ ದಲ್ಲಿ ಯಾರೋ ಮೂಗು ತೂರಿಸಲು ಯತ್ನಿಸುವರು. ಇದು ನಿಮಗೆ ಅಸಹನೆ ಹೆಚ್ಚಿಸುವುದು. ಜಗಳಕ್ಕೆ  ಇಳಿಯದಿರಿ.

ಕಟಕ
ಇತರರಿಗೆ ಬದಲಾಗಲು ಬೋಧಿಸುವ ಮುನ್ನ ನಿಮ್ಮೊಳಗೆ ಬದಲಾವಣೆ ತನ್ನಿರಿ. ನಿಮ್ಮ ಮಾನಸಿಕತೆಯಲ್ಲೆ ಸಮಸ್ಯೆಯಿದೆ. ಆರ್ಥಿಕ ಒತ್ತಡ ಅಧಿಕ.

ಸಿಂಹ
ಏಕಾಂಗಿ ಸಾಹಸ ಬೇಡ.  ಇತರರ ಜತೆಗೂಡಿ ಹೆಜ್ಜೆ ಹಾಕಲು ಕಲಿಯಿರಿ. ಕುಟುಂಬ ಸದಸ್ಯರ ಜತೆ ಅಸಮಾಧಾನ ನಿವಾರಿಸಿಕೊಳ್ಳಿ.  ಪ್ರೀತಿಯಲ್ಲಿ ಯಶ.

ಕನ್ಯಾ
ನಿಮ್ಮ ಬಾಹ್ಯ ಸೌಂದರ್ಯಕ್ಕೆ ಕೂಡಾ ಗಮನ ಕೊಡಿ. ಇತರರನ್ನು ಮೆಚ್ಚಿಸಲು ಅದೂ ಅಗತ್ಯ. ಆಪ್ತರ ನಿರಾಕರಣೆ ಬೇಸರ ತರಬಹುದು.

ತುಲಾ
ಉದ್ದೇಶ ಸಾಧನೆಗೆ ಹಳೆಯ ದಾರಿಯನ್ನೆ ಅನುಸರಿಸುವ ಬದಲು ಹೊಸ ವಿಧಾನ ಕಂಡುಕೊಳ್ಳಿ. ಆಪ್ತರು ನಿಮ್ಮ ಕಾಳಜಿಯನ್ನು ಬಯಸುತ್ತಾರೆ.

ವೃಶ್ಚಿಕ
ನಿಮ್ಮ ಕೆಲಸದ ಬಗ್ಗೆ ಟೀಕೆ ಬಂದರೆ ಅಸಹನೆ ಬೇಡ. ಅದಕ್ಕಿಂತಲೂ ನಿಮ್ಮ ಕೆಲಸವನ್ನು ನೀವೇ ಪರಾಮರ್ಶಿಸಿ. ಕೆಲವರ ಟೀಕೆ ನಿಮ್ಮ ಒಳಿತಿಗೇ ಆಗಿರುತ್ತದೆ.

ಧನು
ನಿಮ್ಮ ಬದುಕಿನ ಮೇಲೆ ಪರಿಣಾಮ ಬೀರುವ ಪ್ರಮುಖ ಬೆಳವಣಿಗೆ ಸಂಭವಿಸುವುದು. ಆರ್ಥಿಕ ಮತ್ತು ಖಾಸಗಿ ಬದುಕಲ್ಲಿ ಭರವಸೆಯ ಅವಕಾಶ.

ಮಕರ
ಸಣ್ಣ ವಿಷಯಕ್ಕೂ ಇಂದು ರೇಗುವಿರಿ. ನಿಮ್ಮ ಮನಸ್ಸು ಅಸ್ತವ್ಯಸ್ತ ಆಗಿರುವುದೇ ಇದಕ್ಕೆ ಕಾರಣ. ಕೆಲವು ಬೆಳವಣಿಗೆ ನೆಮ್ಮದಿ ಕಲಕುವುದು.

ಕುಂಭ
ನಿಮ್ಮ ಕೈಲಾಗದ ಆಶ್ವಾಸನೆ ಕೊಡಲು ಹೋಗದಿರಿ. ಅದನ್ನು ಈಡೇರಿಸುವುದು ಕಷ್ಟ.  ಆತ್ಮೀಯರ ಮಾತು ನಿಮಗೆ ನೋವು ತರುವ ಸಾಧ್ಯತೆಯಿದೆ.

ಮೀನ
ದಿನವಿಡೀ ಅಸಹನೆ, ಅಶಾಂತಿ. ನಿಮ್ಮ ಮನಕ್ಕೆ ಒಗ್ಗದ ಬೆಳವಣಿಗೆ. ಕೌಟುಂಬಿಕವಾಗಿ ಉದ್ವಿಗ್ನತೆ ಸೃಷ್ಟಿ. ಸಮಾಧಾನದಿಂದ ವರ್ತಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!