ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಭಾರೀ ಮಳೆಯಾಗುತ್ತಿದ್ದ ಕಾರಣದಿಂದ ಮಿಜೋರಾಂನಿಂದ ಚುರಾಚಂದ್‌ಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಹಾರುವ ಬದಲು ಪ್ರಧಾನಿ ಮೋದಿ ಅವರು ರಸ್ತೆಯಲ್ಲೇ ಪ್ರಯಾಣಿಸಿದ್ದಾರೆ.
ಮಳೆಯಿಂದಾಗಿ ಚುರಚಂದಪುರಕ್ಕೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಹವಾಮಾನ ಅನುಕೂಲಕರವಾಗಿಲ್ಲ ಎಂದು ಅಧಿಕಾರಿಗಳು ಪ್ರಧಾನಿಯವರಿಗೆ ಮಾಹಿತಿ ನೀಡಿದರು. ರ‍್ಯಾಲಿ ನಡೆಯುವ ಸ್ಥಳವು ವಿಮಾನ ನಿಲ್ದಾಣದಿಂದ ಸಮಾರು ಒಂದು ವರೆಗೆ ಪ್ರಯಾಣಿಸುವಷ್ಟು ದೂರವಿತ್ತು. ಹೀಗಾಗಿ ಮೋದಿ ಕಾರಿನಲ್ಲಿಯೇ ನಿಲ್ದಾಣಕ್ಕೆ ಪ್ರಯಾಣಿಸಿದ್ದಾರೆ.
ಚುರಚಂದಪುರವು ಕುಕಿ-ಝೋ ಜನರು ವಾಸಿಸುವ ಸ್ಥಳವಾಗಿದೆ ಮತ್ತು ಮೈತೈ ಜನರ ಭದ್ರಕೋಟೆಯಾದ ಇಂಫಾಲ್ 61 ಕಿ.ಮೀ ದೂರದಲ್ಲಿದೆ. ಮಳೆಯಿಂದಾಗಿ ಚುರಚಂದಪುರಕ್ಕೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಹವಾಮಾನ ಅನುಕೂಲಕರವಾಗಿಲ್ಲ ಎಂಬ ಮಾಹಿತಿ ತಿಳಿದ ಬಳಿಕ ಪ್ರಧಾನ ಮಂತ್ರಿಯವರು ರಸ್ತೆ ಮೂಲಕ ರ್ಯಾಲಿ ಸ್ಥಳವನ್ನು ತಲುಪಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
‘ಮಣಿಪುರದ ಜನರ ಉತ್ಸಾಹಕ್ಕೆ ನಾನು ನಮಸ್ಕರಿಸುತ್ತೇನೆ. ಇಷ್ಟು ಭಾರೀ ಮಳೆಯಲ್ಲೂ ನೀವು ಇಲ್ಲಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮ್ಮ ಪ್ರೀತಿಗೆ ನಾನು ನಿಮಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಭಾರೀ ಮಳೆಯಿಂದಾಗಿ ನನ್ನ ಹೆಲಿಕಾಪ್ಟರ್ ಬರಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾನು ರಸ್ತೆಯ ಮೂಲಕ ಬರಲು ನಿರ್ಧರಿಸಿದೆ. ಇಂದು ರಸ್ತೆಯಲ್ಲಿ ನಾನು ಕಂಡ ದೃಶ್ಯಗಳು ನೋಡಿ ಹೆಲಿಕಾಪ್ಟರ್ ಹಾರದಿದ್ದೇ ಒಳ್ಳೆಯದು. ಮತ್ತು ನಾನು ರಸ್ತೆಯ ಮೂಲಕ ಬಂದಿದ್ದು ಒಳ್ಳೆಯದು ಎಂದು ನನ್ನ ಹೃದಯ ಹೇಳುತ್ತದೆ. ದಾರಿಯುದ್ದಕ್ಕೂ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಎಲ್ಲರೂ ನನಗೆ ನೀಡಿದ ಪ್ರೀತಿ ಮತ್ತು ವಾತ್ಸಲ್ಯ, ನನ್ನ ಜೀವನದಲ್ಲಿ ಈ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ತಲೆಬಾಗಿ ಮಣಿಪುರದ ಜನರಿಗೆ ನಮಸ್ಕರಿಸುತ್ತೇನೆ’ ಎಂದು ಪ್ರಧಾನಿ ಮೋದಿ ಚುರಾಚಂದ್‌ಪುರದಲ್ಲಿ ಸಾವಿರಾರು ಜನರ ಸಭೆಯಲ್ಲಿ ಹೇಳಿದ್ದಾರೆ.