ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಗರ ಭದ್ರತೆ, ಪೈರಸಿ ಮತ್ತು ಮಾದಕ ವಸ್ತು ಕಳ್ಳ ಸಾಗಾಣೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಮಾರಿಷಸ್ ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು, ಭಾರತ – ಮಾರಿಷಸ್ ಸಾಗರ ನೆರೆಹೊರೆಯ ಪ್ರಮುಖ ರಾಷ್ಟ್ರಗಳಾಗಿವೆ. ಭಾರತದ ನೆರೆ ರಾಷ್ಟ್ರ ಮೊದಲು ನೀತಿ ಮತ್ತು ವಿಷನ್ ಮಹಾಸಾಗರ್ ಗೆ ಮಾರಿಷಸ್ ಅವಿಭಾಜ್ಯ ಭಾಗವಾಗಿದೆ. ಎರಡು ದೇಶಗಳ ದ್ವಿಪಕ್ಷೀಯ ಬಾಂಧವ್ಯ ವಿಶಿಷ್ಟವಾಗಿದ್ದು, ಸಾಂಸ್ಕೃತಿಕ, ನಾಗರಿಕತೆ ಮತ್ತು ಜನಾಂಗೀಯ ಬಾಂಧವ್ಯಗಳಲ್ಲಿ ಇದು ಬೇರು ಬಿಟ್ಟಿದೆ ಎಂದರು.
ಭಾರತ – ಮಾರಿಷಸ್ ನಡುವೆ ವಾಣಿಜ್ಯ, ಆರ್ಥಿಕ, ಹಣಕಾಸು ಮತ್ತು ಹೂಡಿಕೆ ಸಂಬಂಧಗಳು ಗಣನೀಯವಾಗಿ ಪ್ರಗತಿಯಾಗುತ್ತಿದ್ದು, ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ಭದ್ರತೆಗೆ ಎರಡೂ ದೇಶಗಳು ಪ್ರಮುಖ ಕೊಡುಗೆಗಳನ್ನು ನೀಡುತ್ತಿವೆ. ಉಭಯ ದೇಶಗಳ ನಡುವಿನ ಪಾಲುದಾರಿಕೆಯು ಸಾಕಾರ ವೃದ್ಧಿ, ಸಾಗರ ಭದ್ರತೆ ಮತ್ತು ಆರೋಗ್ಯ ರಕ್ಷಣೆ ಅಭಿವೃದ್ಧಿ ವಲಯಗಳಿಗೆ ವಿಸ್ತರಿಸಿದೆ ಎಂದರು.
ಸಾಗರ ಭದ್ರತೆ, ಪೈರಸಿ, ಮಾದಕ ವಸ್ತು ಕಳ್ಳ ಸಾಗಾಣೆಗೆ ಬ್ರೇಕ್ ಹಾಕಲು ಜೊತೆಯಾದ ಭಾರತ, ಮಾರಿಷಸ್!
