Tuesday, September 16, 2025

ಬೆತ್ತಲೆ ಪಾರ್ಟಿ ಪೋಸ್ಟರ್‌ ವೈರಲ್‌: ಆಯೋಜಕಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಯ್‌ಪುರದಲ್ಲಿ ಈ ತಿಂಗಳ ಕೊನೆಯಲ್ಲಿ ‘ಬೆತ್ತಲೆ ಪಾರ್ಟಿ’ ಆಯೋಜಿಸಲಾಗುತ್ತಿದೆ ಎನ್ನಲಾದ ಆಮಂತ್ರಣ ಪೋಸ್ಟರ್​ವೊಂದು ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದರ ಬೆನ್ನಲ್ಲೇ ಅಲರ್ಟ್ ಆದ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಜನರನ್ನು ಬಂಧಿಸಿದ್ದಾರೆ.

ಇಂತಹದ್ದೊಂದು ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಆಯೋಗದ ಅಧ್ಯಕ್ಷೆ ಕಿರಣ್‌ಮಯಿ ನಾಯಕ್ ಅವರು ಕಾರ್ಯಕ್ರಮ ಆಯೋಜಕರು, ಸಂಘಟಕರು ಹಾಗೂ ಆಮಂತ್ರಣ ಪೋಸ್ಟರ್​ ಕಳುಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಯ್‌ಪುರ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಅದರಂತೆ ಪೊಲೀಸರು ಹಲವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಸೆಪ್ಟೆಂಬರ್ 21 ರಂದು ರಾಯ್‌ಪುರ ನಗರದಲ್ಲಿ ‘ನಗ್ನ ಪಾರ್ಟಿ’ ನಡೆಯಲಿದ್ದು, ಸಂಜೆ 4 ಗಂಟೆಯಿಂದ ತಡರಾತ್ರಿಯವರೆಗೆ ಪಾರ್ಟಿ ನಡೆಯಲಿದೆ. ಈ ಪಾರ್ಟಿಗೆ 40,000 ರೂಪಾಯಿ ಪ್ರವೇಶ ಶುಲ್ಕ ಇದೆ. ಪಾರ್ಟಿಯಲ್ಲಿ ಮದ್ಯ, ಮಾದಕ ವಸ್ತು ಸೇರಿದಂತೆ ಎಲ್ಲವೂ ದೊರೆಯುತ್ತದೆ ಎಂಬ ಅಮಿಷವೊಡ್ಡಲಾಗಿದ್ದ ಪೋಸ್ಟರ್​ವೊಂದು​ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ ಆಗಿತ್ತು. 

ಇದನ್ನೂ ಓದಿ