ಹೊಸದಿಗಂತ ಡಿಜಿಟಲ್ ಡೆಸ್ಕ್:
ರವಿ ಪತ್ನಿ ನಾಪತ್ತೆಯಾಗಿದ್ದಾರೆ, ಅತುಲ್ ಹೆಂಡತಿ ಮಿಸ್ಸಿಂಗ್, ನಿತಿನ್ ವೈಫ್ ಕಾಣಿಸ್ತಾ ಇಲ್ಲ.. ಹೀಗೆ ವಿಭಿನ್ನ ಜಾಹೀರಾತೊಂದು ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿಯೂ ಎದ್ದು ಕಾಣಿಸುತ್ತಿದೆ.
ಈ ಜಾಹೀರಾತಿನಲ್ಲಿ ಗಂಡಂಡಿರ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಜಾಹೀರಾತಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರಿನ ನಗರದಾದಂತ್ಯ ವಿಚಿತ್ರವೆನಿಸುವ ಜಾಹೀರಾತು ವೈರಲ್ ಆಗ್ತಿದೆ. ಈ ಜಾಹೀರಾತಿನಲ್ಲಿ ಅತುಲ್ ಪತ್ನಿ ಕಾಣೆಯಾಗಿದ್ದಾಳೆ, ನಿತಿನ್ ಪತ್ನಿ ಕಾಣೆಯಾಗಿದ್ದಾಳೆ, ರವಿ ಪತ್ನಿ ಕಾಣೆಯಾಗಿದ್ದಾಳೆ ಈ ರೀತಿಯ ವಿಚಿತ್ರ ಜಾಹೀರಾತುಗಳು ಬಸ್ ಸ್ಟ್ಯಾಂಡ್, ಫ್ಲೆಕ್ಸ್ ಹಾಗೂ ರಸ್ತೆಬದಿಯ ಬಿಲ್ ಬೋರ್ಡ್‌ನಲ್ಲಿ ಕಾಣಬಹುದು.
ವಿಚಿತ್ರ ಜಾಹೀರಾತಿನ ಫೋಟೋವು ನೆಟ್ಟಿಗರ ತಲೆಯಲ್ಲಿ ಹುಳ ಬಿಟ್ಟಂತಾಗಿದೆ. ಈ ಜಾಹೀರಾತಿನ ಒಳ ಅರ್ಥ ಏನಿರಬಹುದು ನೀವೇ ಗೆಸ್ ಮಾಡಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್ ಗೆ ಬಳಕೆದಾರರು, ಈ ಜಾಹೀರಾತು ನೋಡಲು ಕುತೂಹಲಕರವಾಗಿದೆ, ಆದರೆ ಈ ರೀತಿ ಜಾಹೀರಾತು ನೀಡಿರುವುದು ಯಾಕಾಗಿ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಮೂವರ ಪತ್ನಿಯರು ಒಂದೇ ಸಲ ನಾಪತ್ತೆಯಾಗಲು ಹೇಗೆ ಸಾಧ್ಯ. ಈ ಜಾಹೀರಾತಿನಲ್ಲಿ ಏನೋ ಇರಬೇಕು ಎಂದಿದ್ದಾರೆ. ಮತ್ತೊಬ್ಬರು, ಕೆಲವು ಜಾಹೀರಾತು ನೋಡಿದಾಗ ಕುತೂಹಲದೊಂದಿಗೆ ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತದೆ ಎಂದಿದ್ದಾರೆ.