April 29, 2026
Wednesday, April 29, 2026
spot_img

ಬೆಂಗಳೂರಿಗೆ ಹೊರಟಿದ್ದ ವಿಮಾನದ ಮೂತಿಗೆ ಡಿಕ್ಕಿ ಹೊಡೆದ ಹಕ್ಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ.

ಟೇಕಾಫ್‌ಗಾಗಿ AI 9841 ವಿಮಾನವನ್ನು ರನ್‌ವೇಗೆ ತರುತ್ತಿದ್ದಾಗ ಹದ್ದು ವಿಮಾನದ ಮೂತಿಗೆ ಡಿಕ್ಕಿ ಹೊಡೆದಿದೆ. ವಿಮಾನದಲ್ಲಿ 90 ಜನ ಪ್ರಯಾಣಿಕರಿದ್ದರು.

ಬಳಿಕ ವಿಮಾನ ಹಾರಾಟವನ್ನು ರದ್ದುಗೊಳಿಸಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು. ಇನ್ನೂ, ಈ ವಿಮಾನ ಇಂದು ಬೆಳಗ್ಗೆ 8:15ಕ್ಕೆ ವಿಜಯವಾಡದಿಂದ ಹೊರಟು 9:40ಕ್ಕೆ ಬೆಂಗಳೂರು ತಲುಪಬೇಕಿತ್ತು. ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ವಿಮಾನದ ಪರಿಶೀಲನೆ ನಡೆಸಿದ್ದಾರೆ. 

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !