ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ-ಪಾಕ್ ನಡುವೆ ಮ್ಯಾಚ್ ನಡೆಯಲಿದ್ದು, ಇದಕ್ಕೆ ಭಾರತದಲ್ಲಿ ತ್ರೀವ ವಿರೋಧ ವ್ಯಕ್ತವಾಗುತ್ತಿದೆ.
ಪಹಲ್ಗಾಮ್ ಸಂತ್ರಸ್ತರ ಕುಟುಂಬ ಸದಸ್ಯರು, ಕೇಂದ್ರ ಸರ್ಕಾರ ಈ ಪಂದ್ಯಕ್ಕೆ ಅವಕಾಶ ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನ ಭಾವ್‌ನಗರದ ನಿವಾಸಿ ಸಾವನ್ ಮಾತನಾಡಿ, ಆಪರೇಷನ್ ಸಿಂದೂರ್ ಈಗ ವ್ಯರ್ಥವಾದಂತೆ ಕಾಣುತ್ತಿದೆ ಎಂದು ಬೇಸರ ಹೊರಹಾಕಿದರು.
ಭಾರತ-ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ಆಯೋಜಿಸಲಾಗುತ್ತಿದೆ ಎಂದು ನಮಗೆ ತಿಳಿದಾಗ ತುಂಬಾ ಬೇಸರವಾಯಿತು. ನಮಗೆ ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ಸಂಪರ್ಕ ಇರಕೂಡದು. ಹೀಗಿದ್ದೂ ನೀವು ಪಂದ್ಯವನ್ನು ಆಡಲು ಬಯಸಿದರೆ, ನನ್ನ 16 ವರ್ಷದ ಸಹೋದರನನ್ನು ನನಗೆ ಮರಳಿ ನೀಡಿ. ಅವನ ಮೇಲೆ ಹಲವು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಹಾಗಾಗಿ ನನ್ನ ಪ್ರಕಾರ, ಆಪರೇಷನ್ ಸಿಂದೂರ್ ಈಗ ವ್ಯರ್ಥವಾದಂತಿದೆ ಎಂದು ಅವರು ಹೇಳಿದರು.