ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಹಾಗೂ ಕಾಲ್ತುಳಿತದಂತಹ ಅನಾಹುತ ತಪ್ಪಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ. ಕರ್ನಾಟಕದ ನಾಲ್ಕು ಸೇರಿದಂತೆ ದೇಶದ ಒಟ್ಟು 76 ರೈಲು ನಿಲ್ದಾಣಗಳಲ್ಲಿ’ಪ್ರಯಾಣಿಕ ನಿಲುಗಡೆ ತಾಣ’ಗಳನ್ನು ( ಪ್ಯಾಸೆಂಜರ್ ಹೋಲ್ಡಿಂಗ್ ಏರಿಯಾ ) ನಿರ್ಮಿಸುವ ಯೋಜನೆಗೆ ಅನುಮೋದನೆ ಸಿಕ್ಕಿದೆ.
ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್(ಎಸ್‌ಎಂವಿಟಿ), ಯಶವಂತಪುರ, ಕೃಷ್ಣರಾಜಪುರ ಹಾಗೂ ಮೈಸೂರು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕ ನಿಲುಗಡೆ ತಾಣಗಳು ತಲೆ ಎತ್ತಲಿವೆ. 2026ರಲ್ಲಿ ಹಬ್ಬದ ಋುತುವಿನ ವೇಳೆಗೆ ನಿರ್ಮಾಣ ಪೂರ್ಣಗೊಳಿಸಲು ಸಚಿವರು ಆದೇಶಿಸಿದ್ದಾರೆ.
ಕುಂಭಮೇಳದ ಸಂದರ್ಭದಲ್ಲಿ ದಿಲ್ಲಿರೈಲು ನಿಲ್ದಾಣದಲ್ಲಿ 18 ಜನರನ್ನು ಬಲಿಪಡೆದ ಕಾಲ್ತುಳಿತದ ಬಳಿಕ ಅಲ್ಲಿ’ಪ್ಯಾಸೆಂಜರ್ ಹೋಲ್ಡಿಂಗ್ ಏರಿಯಾ’ ನಿರ್ಮಿಸಲಾಗಿದ್ದು, ಅದರ ಯಶಸ್ಸಿನ ಆಧಾರದ ಮೇಲೆ ಇತರೆ ನಿಲ್ದಾಣಗಳಿಗೂ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ತಾಣಗಳನ್ನು ಟಿಕೆಟ್ ಪೂರ್ವ, ಟಿಕೆಟಿಂಗ್ ಸಮಯ ಹಾಗೂ ಟಿಕೆಟ್ ಪಡೆದ ಬಳಿಕ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಶೌಚಾಲಯ, ಕುಡಿಯುವ ನೀರು, ಕುರ್ಚಿಗಳನ್ನು ಒಳಗೊಂಡಿರುವ ಈ ತಾಣಗಳು ಪ್ರಯಾಣಿಕರ ಸುಗಮ ಸಂಚಾರ ಹಾಗೂ ಆರಾಮದಾಯಕತೆಯನ್ನು ಹೆಚ್ಚಿಸಲಿವೆ.
ರಾಜ್ಯದ 4 ನಿಲ್ದಾಣಗಳಲ್ಲಿ ಪ್ಯಾಸೆಂಜರ್ ಹೋಲ್ಡಿಂಗ್ ಏರಿಯಾ ನಿರ್ಮಾಣ

