July 21, 2026
Tuesday, July 21, 2026
spot_img

ಇಂದು ಯಾವ ದಿನ ಅಂತ ನೆನಪಿಲ್ವಾ? ಸಿಎಂಗೆ ಆರ್‌. ಅಶೋಕ್‌ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ವರ್ಷ ಭಾರೀ ಮಳೆಗೆ ಬೆಂಗಳೂರಿನ ರಸ್ತೆ ತೀರಾ ಹದಗೆಟ್ಟು ಬಹುತೇಕ ಕಡೆ ಹೊಂಡ-ಗುಂಡಿ ಉಂಟಾಗಿದೆ. ವಿಪಕ್ಷಗಳು, ಸಾರ್ವಜನಿಕರ ಟೀಕೆಗಳ ನಂತರ ರಸ್ತೆಗುಂಡಿ ಮುಚ್ಚುವ ಕೆಲಸಕ್ಕೆ ಸರ್ಕಾರ ಮುಂದಾಗಿದ್ದು, ಅನೇಕ ಕಡೆ ಗುಂಡಿ ಮುಚ್ಚುವ ಕೆಲಸವಾಗುತ್ತಿದೆ.

ಆದರೆ ಕಳೆದ ವಾರದಿಂದ ಮೋಂಥಾ ಚಂಡಮಾರುತ ಅಬ್ಬರಕ್ಕೆ ರಸ್ತೆ ಗುಂಡಿ ಮುಚ್ಚುವ ಕೆಲಸ ವಿಳಂಬವಾಗಿದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅಕ್ಟೋಬರ್‌ 31ರೊಳಗೆ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ ಎಂದು ಹೇಳಿದ್ದರು. ಈ ವಿಷಯವಾಗಿ ಆರ್‌. ಅಶೋಕ್‌ ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರಿಗೆ ಮೃತ್ಯುಕೂಪಗಳಾಗಿರುವ ರಸ್ತೆಗುಂಡಿಗಳನ್ನು ಮುಚ್ಚಲು ನೀಡಿದ್ದ ಡೆಡ್‌ಲೈನ್ ಯಾವ ತಾರೀಖಿಗೆ ಮುಗಿಯುತ್ತದೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ನೆನಪಿದೆಯೇ. ಇವತ್ತು ಯಾವ ತಾರೀಖು ಎಂಬುದು ಗೊತ್ತಿದೆಯೇ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.

ರಸ್ತೆಗುಂಡಿ ಮುಚ್ಚುವ ಗಡುವು ಇಂದಿಗೆ ಮುಗಿದಿದ್ದರೂ ರಸ್ತೆಗುಂಡಿಗಳನ್ನು ಮುಚ್ಚಿಲ್ಲ. ಅಧಿಕಾರಿಗಳು ನಿಮ್ಮ ಮಾತಿಗೆ ಕವಡೆಕಾಸಿನ ಕಿಮ್ಮತ್ತೂ ಕೊಡುತ್ತಿಲ್ಲ. ಇದೊಂದು ನಾಲಾಯಕ್ ಸರ್ಕಾರ. ಜನ ಈ ಸರ್ಕಾರಕ್ಕೆ ಛೀ.. ಥೂ.. ಎಂದು ಉಗಿಯುತ್ತಿದ್ದಾರೆ. ಶಾಪ ಹಾಕುತ್ತಿದ್ದಾರೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಕರ್ನಾಟಕವನ್ನು ಉಳಿಸಿ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !