Tuesday, October 14, 2025

WEATHER | ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸೆ.24ರವರೆಗೂ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕದ ಬಹುತೇಕ ಕಡೆ ಮತ್ತೆ ಮಳೆ ಶುರುವಾಗಿದೆ. ಬೆಂಗಳೂರು ಸೇರಿ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 24ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ವಿಜಯನಗರ, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ,ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ , ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಝಲ್ಕಿ ಕ್ರಾಸ್, ಸಿಂದಗಿ, ಮಂಠಾಳ, ಗಾಣಗಾಪುರ, ಚಿಕ್ಕೋಡಿ, ಆಳಂದ, ಆಗುಂಬೆ, ಅಫ್ಝಲ್​ಪುರ, ರಾಯಲ್ಪಾಡು, ಇಳಕಲ್, ದೇವರಹಿಪ್ಪರಗಿ, ಮಸ್ಕಿ, ಕುಷ್ಟಗಿ, ಕಕ್ಕೇರಿ, ಇಂಡಿ, ಹೊನ್ನಾವರ, ಭಾಲ್ಕಿ, ಬನವಾಸಿ, ಯಲಬುರ್ಗಾ,ಔರಾದ್, ಶಕ್ತಿನಗರ, ಸಿದ್ದಾಪುರ, ಶೃಂಗೇರಿ, ಕುರ್ಡಿ, ಕೊಟ್ಟಿಗೆಹಾರ, ಕೋಟಾ, ಜಯಪುರ, ಧರ್ಮಸ್ಥಳ, ಗೇರುಸೊಪ್ಪ, ಬೀದರ್, ಭದ್ರಾವತಿ, ಬರಗೂರು, ಬಸವನ ಬಾಗೇವಾಡಿ, ಅಥಣಿ, ಅಂಕೋಲಾದಲ್ಲಿ ಮಳೆಯಾಗಿದೆ.

error: Content is protected !!