ಗುರುವಾರ, 9 ಸೆಪ್ಟೆಂಬರ್ 2021,
ಮೇಷ
ಮಾನಸಿಕ ಖಿನ್ನತೆ. ಎಲ್ಲದರಲ್ಲೂ ನಿರಾಸಕ್ತಿ. ದೇವರು, ಧರ್ಮದ ವಿಷಯದಲ್ಲಿ ಹೆಚ್ಚು ಆಸಕ್ತಿ ಮೊಳೆಯ ಬಹುದು. ಕೌಟುಂಬಿಕ ಕಿರಿಕಿರಿ ಕಾಡುವುದು.
ವೃಷಭ
ಅಧ್ಯಯನದಲ್ಲಿ ಯಶಸ್ಸು. ಸ್ಪರ್ಧಾತ್ಮಕ ಪರೀಕ್ಷೆಯಿದ್ದರೆ ಪೂರಕ ಫಲಿತಾಂಶ. ಸಂತೋಷ ಆಚರಣೆಯ ಕಾರಣದಿಂದ ಖರ್ಚು ಹೆಚ್ಚಬಹುದು.
ಮಿಥುನ
ಆರ್ಥಿಕ ಲಾಭ. ನಿಮ್ಮ ಕಾರ್ಯಶೈಲಿಯಲ್ಲಿ ಬದಲಾವಣೆ ಮಾಡಬೇಕಾಗುವ ಪ್ರಸಂಗ. ಪ್ರೀತಿಯ ವಿಚಾರವು ಹೆಚ್ಚು ಆದ್ಯತೆ ಪಡೆಯುವುದು.
ಕಟಕ
ಆರ್ಥಿಕವಾಗಿ ತುಸು ಸುಧಾರಣೆ. ಇತರರಿಂದ ನೆರವು ಪಡೆಯುವಿರಿ. ಕುಟುಂಬದಲ್ಲಿನ ಮನಸ್ತಾಪವು ಪರಿಹಾರ ಗೊಳ್ಳುವ ಸಂಕೇತಗಳು ಕಾಣಿಸುವುದು.
ಸಿಂಹ
ನಿಮ್ಮ ಕೆಲಸ ಮಾಡಿ, ಫಲಾಫಲಗಳ ಕುರಿತು ಚಿಂತಿಸದಿರಿ ಎಂಬ ವಾಕ್ಯವನ್ನು ಇಂದು ನೀವು ಅನುಸರಿಸಬೇಕು. ಸಹನೆಯಿಂದ ಫಲ ದೊರಕುವುದು.
ಕನ್ಯಾ
ಪ್ರಮುಖ ಗುರಿ ಸಾಸುವ ನಿಟ್ಟಿನಲ್ಲಿ ಅಡ್ಡಿಗಳು. ಧಾರ್ಮಿಕತೆ ಹೆಚ್ಚಿನ ಆಸಕ್ತಿ ಹುಟ್ಟಿಸಬಹುದು. ಅಧ್ಯಾತ್ಮದಿಂದ ನೋವು ಮರೆಯುವ ಯತ್ನ ನಿಮ್ಮದು.
ತುಲಾ
ಸಮಯದೊಂದಿಗೆ ಹೋರಾಟ. ಕಾಲಮಿತಿಯಲ್ಲಿ ಕೆಲಸ ಮುಗಿಸ ಬೇಕಾದ ಒತ್ತಡ. ಸಹಕಾರದ ಕೊರತೆ. ಉದ್ವಿಗ್ನತೆ, ಅಸಹನೆ ಹೆಚ್ಚಳ.
ವೃಶ್ಚಿಕ
ಜೀವನದಲ್ಲಿ ಪ್ರಮುಖ ಪಾಠ ಕಲಿಯುವ ಪ್ರಸಂಗ ಇಂದು ಒದಗೀತು. ತಪ್ಪುಗಳನ್ನು ಕೂಡಲೇ ಸರಿಪಡಿಸಿ. ತಪ್ಪನ್ನೇ ಸಮರ್ಥಿಸುವ ಪ್ರಯತ್ನಕ್ಕೆ ಕೈಹಾಕಬೇಡಿ.
ಧನು
ಇತರರ ಸಲಹೆ ಪಾಲಿಸುವುದರಿಂದ ನಿಮಗೆ ಒಳಿತೇ ಆಗಲಿದೆ. ಹಾಗಾಗಿ ಕಿವಿಮಾತನ್ನು ಕಡೆಗಣಿಸಬೇಡಿ. ಆರ್ಥಿಕ ಒತ್ತಡ ತುಸು ಸಡಿಲವಾದೀತು.
ಮಕರ
ಕೆಲವರು ನಿಮ್ಮನ್ನು ತಮ್ಮ ಸ್ವಾರ್ಥಕ್ಕೆ ಬಳಸಲು ಯತ್ನಿಸುವರು. ಆ ಕುರಿತು ಎಚ್ಚರವಿರಲಿ. ಸರಿಯೆಂದು ಕಂಡ ಕಾರ್ಯ ಮಾಡಲು ಹಿಂಜರಿಕೆ ತೋರದಿರಿ.
ಕುಂಭ
ಮುಂಜಾನೆಯ ಅವ ಒತ್ತಡದಿಂದಲೇ ಕಳೆಯುವುದು. ಆದರೆ ಅಪರಾಹ್ನ ನಿರಾಳತೆ ಪಡೆಯುವಿರಿ. ಕೌಟುಂಬಿಕ ಸಹಕಾರ, ಸಮಾಧಾನ.
ಮೀನ
ಬಾಕಿ ಉಳಿದಿರುವ ಕಾರ್ಯ ಮುಗಿಸಿರಿ. ಬಳಿಕ ಹೊಸ ವ್ಯವಹಾರಕ್ಕೆ ಕೈ ಹಾಕಿರಿ. ಉದಾಸೀನತೆಗೆ ಕುಟುಂಬಸ್ಥರಿಂದ ಟೀಕೆ ಕೇಳುವಿರಿ.