ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಪ್ತಸಾಗರದಾಚೆ ಎಲ್ಲೋ ಸಿನಿಮಾದಿಂದ ಎಲ್ಲರ ಮನೆಮಗಳಾಗಿದ್ದ ನಟಿ ರುಕ್ಮಿಣಿ ವಸಂತ್ ಇದೀಗ ಕಾಂತಾರ ಚಾಪ್ಟರ್-1 ಸಿನಿಮಾದಿಂದ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಕನಕವತಿ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿಯನ್ನು ಜನ ಇಷ್ಟಪಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ರುಕ್ಮಿಣಿಗೆ ನ್ಯಾಷನಲ್ ಕ್ರಶ್ ಸ್ಥಾನಕ್ಕೆ ಏರಿಸಿದ್ದಾರೆ. ಸದ್ಯ ರುಕ್ಮಿಣಿ ಅಂದಕ್ಕೆ ಇಡೀ ದೇಶವೇ ಮನಸೋತಿದ್ದು, ನಟಿಯನ್ನು ಅರಸಿ ಹೆಚ್ಚೆಚ್ಚು ಅವಕಾಶಗಳು ಬರುತ್ತಿವೆ.
ಇನ್ನು ಕಾಂತಾರ ಚಾಪ್ಟರ್ 1 ಬಿಡುಗಡೆಯಾದ ಮೊದಲ ವಾರದಲ್ಲೇ ಭರ್ಜರಿ ಕಲೆಕ್ಷನ್ ಮಾಡಿದ್ದು, ಈಗಲೂ ಹೌಸ್‌ಫುಲ್ ಶೋಗಳು ನಡೆಯುತ್ತಿವೆ. ಜನ ರಿಷಭ್ ನಟನೆ, ಡೈರೆಕ್ಷನ್ ಹಾಗೂ ಬರವಣಿಗೆಯನ್ನು ಮೆಚ್ಚಿ ಸಂಪೂರ್ಣ ಅಪ್ಪಿಕೊಂಡಿದ್ದಾರೆ.
CINE | ಕಾಂತಾರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆದ ರುಕ್ಕು, ಈಗ ಅವರೇ ನ್ಯಾಷನಲ್ ಕ್ರಶ್
