Sunday, October 5, 2025

ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ, ಟ್ರಾಫಿಕ್‌ ಜಾಮ್‌ನಿಂದ ಆ್ಯಂಬುಲೆನ್ಸ್‌ನಲ್ಲಿಯೇ ಮಹಿಳೆ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಲ್ಲಿ ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು, ಆ್ಯಂಬುಲೆನ್ಸ್‌ನಲ್ಲಿಯೇ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.

ಸಂಚಾರ ದಟ್ಟಣೆಯಿಂದಾಗಿ ಮುಂಬೈ ಆಸ್ಪತ್ರೆಗೆ ಸಾಗಿಸುತ್ತಿದ್ದ 49 ವರ್ಷದ ಛಾಯಾ ಪುರವ್ ಅವರು ಸಾವನ್ನಪ್ಪಿದ್ದಾರೆ. ಪಾಲ್ಘರ್‌ನಲ್ಲಿ ಅಸಮರ್ಪಕ ಆರೋಗ್ಯ ಮೂಲಸೌಕರ್ಯ ಹಾಗೂ ಜಿಲ್ಲೆಯನ್ನು ಮ್ಯಾಕ್ಸಿಮಮ್ ಸಿಟಿಗೆ ಸಂಪರ್ಕಿಸುವ NH-48 ರಲ್ಲಿ ಸಂಚಾರ ದಟ್ಟಣೆಯು ಈ ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ಜುಲೈ 31 ರಂದು, ಪಾಲ್ಘರ್‌ನ ಮಧುಕರ್ ನಗರದಲ್ಲಿರುವ ಅವರ ಮನೆಯ ಬಳಿ ಮರದ ಕೊಂಬೆ ಬಿದ್ದು, ಛಾಯಾ ಪುರವ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. .ಅವರ ಪಕ್ಕೆಲುಬುಗಳು, ಭುಜಗಳು ಮತ್ತು ತಲೆಗೆ ಗಾಯಗಳಾಗಿದ್ದವು. ಪಾಲ್ಘರ್‌ನಲ್ಲಿ ಟ್ರಾಮಾ ಸೆಂಟರ್ ಇಲ್ಲದ ಕಾರಣ, ಸ್ಥಳೀಯ ಆಸ್ಪತ್ರೆಯೊಂದು ಅವರನ್ನು ಮುಂಬೈನ ಹಿಂದೂಜಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿತು. ಪುರವ್‌ಗೆ ಅರಿವಳಿಕೆ ನೀಡಿ ಅವರನ್ನು ಸಾಗಿಸಲಾಗುತ್ತಿತ್ತು. 100 ಕಿ.ಮೀ ಪ್ರಯಾಣವು ಸಾಮಾನ್ಯವಾಗಿ ಸುಮಾರು 2.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಸುಮಾರು ನಾಲ್ಕು ಗಂಟೆಗಳಾದರೂ ಟ್ರಾಫಿಕ್‌ನಿಂದಾಗಿ ಅವರಿಗೆ ಆಸ್ಪತ್ರೆಗೆ ತೆರಳಲಾಗಲಿಲ್ಲ.

ಅರಿವಳಿಕೆಯ ಪರಿಣಾಮ ಕಡಿಮೆಯಾಗಲು ಪ್ರಾರಂಭಿಸಿದಂತೆ, ಅವರಿಗೆ ನೋವು ಹೆಚ್ಚಾಗತೊಡಗಿತ್ತು. ಆಂಬ್ಯುಲೆನ್ಸ್ ಹಿಂದೂಜಾ ಆಸ್ಪತ್ರೆಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಮೀರಾ ರಸ್ತೆಯಲ್ಲಿರುವ ಆರ್ಬಿಟ್ ಆಸ್ಪತ್ರೆಗೆ ಸಂಜೆ 7 ಗಂಟೆ ಸುಮಾರಿಗೆ ತಲುಪಿದ್ದರಿಂದ ಅವರ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ವೈದ್ಯರು ಆದರೆ ಆಗಲೇ ತುಂಬಾ ತಡವಾಗಿತ್ತು. ವೈದ್ಯರು ಶ್ರೀಮತಿ ಪುರವ್ ಅವರನ್ನು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅವರ ಪತಿ ಕೌಶಿಕ್ ಅವರಿಗೆ ಕೇವಲ 30 ನಿಮಿಷಗಳ ಮೊದಲು ಆಸ್ಪತ್ರೆಗೆ ತಲುಪಿದ್ದರೆ ಅವರನ್ನು ಉಳಿಸಬಹುದಿತ್ತು ಹೇಳಲಾಗಿದೆ.

ನಾನು ನನ್ನ ಪತ್ನಿ ನಾಲ್ಕು ಗಂಟೆಗಳ ಕಾಲ ಒದ್ದಾಡುವುದನ್ನು ನೋಡಿದೆ. ನಾನು ಅಸಹಾಯಕನಾಗಿದ್ದೆ. ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಕೊರಗು ನನಗೆ ಕಾಡುತ್ತಿದೆ. ರಸ್ತೆ ಹೊಂಡಗಳಿಂದ ತುಂಬಿತ್ತು. ಅದರಿಂದ ಆಕೆ ಮತ್ತಷ್ಟು ಒದ್ದಾಡಿದಳು. ನೋವಿನಿಂದ ಕಿರುಚುತ್ತಿದ್ದಳು. ಆಕೆ ಒಂದೇ ಸಮನೆ ಅಳುತ್ತಿದ್ದಳು. ನನ್ನನ್ನು ಉಳಿಸಿ ಎಂದು ನನ್ನಲ್ಲಿ ಬೇಡಿಕೊಂಡಿದ್ದಳು. ಆದರೆ ನನಗೆ ಅದು ಸಾಧ್ಯವಾಗಲಿಲ್ಲ‌ ಎಂದು ಅವರು ಹೇಳಿದ್ದಾರೆ.