Wednesday, September 3, 2025

ಪ್ರವಾಹದಿಂದ ತತ್ತರಿಸಿದ 10 ಜಿಲ್ಲೆಗಳನ್ನು ದತ್ತು ಪಡೆದ ಸಿಂಗರ್‌ ದಿಲ್ಜೀತ್‌ ದೋಸಾಂಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭೀಕರ ಪ್ರವಾಹದಿಂದ ಪಂಜಾಬ್​ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸಿನಿಮಾ ಸೆಲೆಬ್ರಿಟಿಗಳು ಸರ್ಕಾರೇತರ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತದೊಂದಿಗೆ ಸೇರಿ ತಮ್ಮ ಸಹಾಯ ಹಸ್ತ ಚಾಚುತ್ತಿದ್ದಾರೆ. ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ತಮ್ಮದೇ ಆದ ಜನಪ್ರಿಯತೆ ಹೊಂದಿರುವ ಗಾಯಕ-ನಟ ದಿಲ್ಜಿತ್ ದೋಸಾಂಜ್ ಕೂಡಾ ನೆರವಿಗೆ ಬಂದಿದ್ದಾರೆ.

ಪಂಜಾಬ್​ನ ಗುರುದಾಸ್ಪುರ್ ಮತ್ತು ಅಮೃತಸರದಲ್ಲಿ ಹೆಚ್ಚು ಹಾನಿಗೊಳಗಾದ 10 ಗ್ರಾಮಗಳನ್ನು ದತ್ತು ತೆಗೆದುಕೊಂಡು ಸರ್ಕಾರೇತರ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತದೊಂದಿಗೆ ಪರಿಹಾರ ಕಾರ್ಯಕ್ಕೆ ಮುಂದಾಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅವರ ತಂಡ ಮಾಹಿತಿ ಒದಗಿಸಿದೆ.’ಆಹಾರ, ನೀರು ಮತ್ತು ವೈದ್ಯಕೀಯ ನೆರವಿನಂತಹ ಅಗತ್ಯ ವಸ್ತುಗಳ ಮೇಲೆ ಕೇಂದ್ರೀಕರಿಸಲಾಗುತ್ತಿದ್ದು, ಪುನರ್ವಸತಿ ಮತ್ತು ದೀರ್ಘಕಾಲೀನ ಪುನರ್ನಿರ್ಮಾಣವನ್ನು ಯೋಜಿಸಲಾಗುತ್ತಿದೆ. ಒಟ್ಟಾಗಿ, ನಾವು ಪುನರ್ನಿರ್ಮಿಸಬಹುದು ಎಂದು ಬರೆದುಕೊಳ್ಳಲಾಗಿದೆ.

ಖ್ಯಾತ ನಟ ಸಂಜಯ್ ದತ್ ತಮ್ಮ ಅಫೀಶಿಯಲ್​ ಎಕ್ಸ್​​ ಪೋಸ್ಟ್​​ನಲ್ಲಿ, ಪಂಜಾಬ್‌ನಲ್ಲಿ ಪ್ರವಾಹದಿಂದ ಉಂಟಾದ ವಿನಾಶ ನಿಜಕ್ಕೂ ಹೃದಯವಿದ್ರಾವಕ. ಪ್ರವಾಹ ಪೀಡಿತ ಎಲ್ಲರಿಗೂ ಶಕ್ತಿ ಸಿಗಲಿ. ನನ್ನ ಪ್ರಾರ್ಥನೆ ಇದೆ. ನಾನು ಸಾಧ್ಯವಿರುವ ಎಲ್ಲಾ ರೀತಿಯಲ್ಲಿಯೂ ಬೆಂಬಲಿಸುತ್ತೇನೆ. ಬಾಬಾಜಿ ಪಂಜಾಬ್‌ನಲ್ಲಿರುವ ಎಲ್ಲರನ್ನೂ ಆಶೀರ್ವದಿಸಿ, ರಕ್ಷಿಸಲಿ ಎಂದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ