Friday, September 19, 2025

WEATHER |ವೀಕೆಂಡ್‌ ಬೆಚ್ಚಗೆ ಮನೆಯಲ್ಲೇ ಕೂತ್ಕೊಳ್ಳಿ, ಸಿಕ್ಕಾಪಟ್ಟೆ ಮಳೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಗುರುವಾರ ಸಂಜೆ ಶುರುವಾದ ಮಳೆ ಶುಕ್ರವಾರವೂ ನಿಂತಿಲ್ಲ. ಈ ವಾರಾಂತ್ಯದಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ,ವಿಜಯಪುರ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರದಲ್ಲಿ ಕೂಡ ಮಳೆಯಾಗಲಿದೆ.

ಯಡ್ರಾಮಿ, ಕೆಂಭಾವಿ, ಕಕ್ಕೇರಿ, ಗುಬ್ಬಿ, ಯಲಹಂಕ, ಸಿದ್ದಾಪುರ, ಮುದಗಲ್, ಕೆರೂರು, ಬೆಳ್ತಂಗಡಿಯಲ್ಲಿ ಭಾರಿ ಮಳೆಯಾಗಿದೆ. ಕಾರ್ಕಳ, ಹುಣಸಗಿ, ಆಲಮಟ್ಟಿ, ಚಿಂತಾಮಣಿ, ಸಿಂದಗಿ, ಮಧುಗಿರಿ, ಜೇವರ್ಗಿ, ಬಿಳಗಿ, ಭಾಲ್ಕಿ, ಬೆಂಗಳೂರು ಕೆಐಎಎಲ್​, ವಿಜಯಪುರ, ಥೊಂಡೇಭಾವಿ, ಸೈದಾಪುರ, ರಬಕವಿ, ಮದ್ದೂರು, ಕೋಲಾಪುರ, ಕುಷ್ಟಗಿ, ಇಳಕಲ್, ಹುನಗುಂದ, ಹುಮ್ನಾಬಾದ್, ಗೋಪಾಲನಗರ, ಕ್ಯಾಸಲ್​ರಾಕ್​ನಲ್ಲಿ ಮಳೆಯಾಗಿದೆ.

ಇದನ್ನೂ ಓದಿ