Sunday, October 1, 2023

Latest Posts

ದಿನಭವಿಷ್ಯ: ಹೊಸ ಬ್ಯುಸಿನೆಸ್ ಆರಂಭದಲ್ಲಿ ಬರೀ ತೊಂದರೆ, ಆದರೆ ದೀರ್ಘಕಾಲ ಬಾಳಿಕೆ!

ಮೇಷ
ಕೌಟುಂಬಿಕ ಬದುಕನ್ನು ಬಲಿಗೊಟ್ಟು ಬರೀ ಕೆಲಸ ದಲ್ಲೆ ಮುಳುಗಿದ್ದೇನೆ ಎಂಬ ಭಾವ ಕಾಡಬಹುದು.  ಕಾಲ ಮಿಂಚಿಲ್ಲ, ಕುಟುಂಬಕ್ಕೆ ಗಮನ ಕೊಡಿ.

ವೃಷಭ
ಬಾಹ್ಯ ಸೌಂದರ್ಯಕ್ಕೆ ನೀವು ಆದ್ಯತೆ ಕೊಡುವಿರಿ. ಇತರರನ್ನು ಮೆಚ್ಚಿಸುವ ಪ್ರಯತ್ನ ನಿಮ್ಮದು. ಅದರಲ್ಲಿ ತಪ್ಪಿಲ್ಲ. ಆದರೆ ಅದನ್ನೆ ಅತಿಯಾಗಿಸಬೇಡಿ.

ಮಿಥುನ
ಗೊಂದಲಭರಿತ ಮನಸ್ಥಿತಿ. ಯಾರ ಜತೆಗೂ ಬೆರೆಯಲಾಗದ ಏಕಾಂಗಿತನ. ಆಪ್ತರಿಂದ ಸಾಂತ್ವನ ಬಯಸುವಿರಿ. ಯೋಗ, ಧ್ಯಾನ ನಿಮಗೆ ಸಹಕಾರಿಯಾದೀತು.

ಕಟಕ
ನವೋಲ್ಲಾಸ. ಹೊಸದೊಂದು ಕಾರ್ಯ ನಿಮ್ಮಲ್ಲಿ ಉತ್ಸಾಹ ತುಂಬಲಿದೆ. ನಿಮಗೆ ಪೂರಕವಾದ ಸುದ್ದಿ ಕೇಳುವಿರಿ. ಬಂಧುತ್ವ ವೃದ್ಧಿ.

ಸಿಂಹ
ಮನೆಯ ನವೀಕರಣಕ್ಕೆ ಮನಸ್ಸು ಮಾಡಿದ್ದರೆ ಅದಕ್ಕೆ ಪೂರಕ ಸ್ಥಿತಿ ಒದಗುವುದು. ಆರ್ಥಿಕ ಪರಿಸ್ಥಿತಿ ಸುಧಾರಣೆ. ನೆರೆಕರೆಯೊಂದಿಗೆ ಮನಸ್ತಾಪ ಮೂಡೀತು.

ಕನ್ಯಾ
ಸರಿಯಾಗಿ ಯೋಚಿಸಿ ಹೊಸ ವ್ಯವಹಾರ ಶುರು ಮಾಡಿದರೆ ಒಳಿತು. ಆರಂಭದಲ್ಲಿ ವಿಘ್ನ ಒದಗೀತು. ಆದರೆ ದೀರ್ಘಾವಧಿ ಬಾಳಿಕೆ ಬಂದೀತು.

ತುಲಾ
ಸಂಧಾನ, ಪಾಲುದಾರಿಕೆ, ವ್ಯವಹಾರ ಸಂಬಂಧಿ ಭೇಟಿಗೆ ಉದ್ದೇಶಿಸಿದ್ದರೆ ಅದರಲ್ಲಿ ಯಶಸ್ಸು. ಆದರೆ ಕೆಲವರಿಂದ ವಿಘ್ನ .

ವೃಶ್ಚಿಕ
ಖಾಸಗಿ ಬದುಕಿನಲ್ಲಿ ಕೆಲವು ಮಹತ್ವದ ಬೆಳವಣಿಗೆ. ಮನಸ್ಸು ಕೆಡಿಸುವ ಘಟನೆ ಉಂಟಾದೀತು. ಯಾರೂ ನಿಮ್ಮ ಪರವಾಗಿಲ್ಲ ಎಂಬ ಅನಿಸಿಕೆ ಕಾಡುವುದು.

ಧನು
ನಿಮ್ಮ ಸುತ್ತಲಿನ ಹಿತೈಷಿಗಳಿಂದ ಉತ್ತಮ ಸಲಹೆ ಕೇಳಿಬರುವುದು. ಅವುಗಳಿಗೆ ಕಿವಿಗೊಡು ವುದು ಉತ್ತಮ. ಅದು ನಿಮಗೆ ಹಿತ ತರಲಿದೆ. ಕೌಟುಂಬಿಕ ನೆಮ್ಮದಿ.

ಮಕರ
ನೀವು ಉದ್ದೇಶಿಸಿದ ಕಾರ್ಯವಾಗದು. ನಿರೀಕ್ಷಿಸದ ವಿಘ್ನಗಳು. ಬದಲಿ ಮಾರ್ಗ ಹುಡುಕಬೇಕು. ಅದಕ್ಕೆ ಸೂಕ್ತ ಸಹಕಾರ ದೊರಕುವುದು.

ಕುಂಭ
ಯಶಸ್ಸಿಗೆ ಅಡ್ಡದಾರಿ ಗಳಿಲ್ಲ. ಇದನ್ನು ನೀವು ಅರಿಯಬೇಕು. ಶ್ರಮವೇ ಪಡದೆ ಫಲ ದೊರಕಬೇಕೆಂದು ಆಶಿಸದಿರಿ. ಆರ್ಥಿಕ ಮುಗ್ಗುಟ್ಟು ಕಾಡೀತು.

ಮೀನ
ಗೆಳೆತನವೊಂದು ಪ್ರೀತಿಯಾಗಿ ಮಾರ್ಪಡಬಹುದು. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಕೌಟುಂಬಿಕ ಮತ್ತು ವಿತ್ತ ಸಮಸ್ಯೆ ಪರಿಹಾರ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!