Thursday, December 18, 2025

IPL ಹರಾಜು ಸಮರಕ್ಕೆ ವೇದಿಕೆ ಸಜ್ಜು: 369 ಆಟಗಾರರಿಗೆ ಅದೃಷ್ಟ ಪರೀಕ್ಷೆ, ಕೋಟಿಗಳ ಸುರಿಮಳೆ ಖಚಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುನಿರೀಕ್ಷಿತ ಐಪಿಎಲ್ 2026 ರ ಮಿನಿ ಹರಾಜಿಗೆ ಅಬುಧಾಬಿ ವೇದಿಕೆ ಸಿದ್ಧಗೊಳಿಸಿದೆ. ಆರಂಭದಲ್ಲಿ 350 ಆಟಗಾರರನ್ನು ಹರಾಜಿಗೆ ಆಯ್ಕೆ ಮಾಡಲಾಗಿತ್ತು, ಆದರೆ ಈಗ ಲಭ್ಯವಿರುವ ವರದಿಗಳ ಪ್ರಕಾರ, ಇನ್ನೂ 19 ಆಟಗಾರರನ್ನು ಈ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಹರಾಜಿನಲ್ಲಿ ಒಟ್ಟು 369 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ.

ಐಪಿಎಲ್ 2026 ರ ಸೀಸನ್‌ಗಾಗಿ ಹತ್ತು ಫ್ರಾಂಚೈಸಿಗಳ ಬಳಿ ಒಟ್ಟು 237.55 ಕೋಟಿ ಹಣ ಲಭ್ಯವಿದೆ. ತಂಡಗಳಲ್ಲಿ ಉಳಿದಿರುವ ಹಣದ ವಿವರ ಹೀಗಿದೆ:

ಕೋಲ್ಕತ್ತಾ ನೈಟ್ ರೈಡರ್ಸ್ 64.30 ಕೋಟಿಗಳೊಂದಿಗೆ ಅತಿ ಹೆಚ್ಚು ಹಣವನ್ನು ಹೊಂದಿದ್ದು, ದೊಡ್ಡ ಆಟಗಾರರನ್ನು ಖರೀದಿಸುವ ಅವಕಾಶವನ್ನು ಹೊಂದಿದೆ.

ಇದಕ್ಕೆ ವಿರುದ್ಧವಾಗಿ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೇವಲ 2.75 ಕೋಟಿ ಯೊಂದಿಗೆ ಅತಿ ಕಡಿಮೆ ಹಣವನ್ನು ಉಳಿಸಿಕೊಂಡಿದೆ.

ಈ ಹರಾಜಿನಲ್ಲಿ ಒಟ್ಟು 77 ಆಟಗಾರರ ಸ್ಲಾಟ್‌ಗಳು ಲಭ್ಯವಿವೆ. ಇದರಲ್ಲಿ 52 ಭಾರತೀಯ ಆಟಗಾರರಿಗೆ ಮತ್ತು 25 ವಿದೇಶಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಅಬುಧಾಬಿಯಲ್ಲಿ ನಡೆಯಲಿರುವ ಈ ಮಿನಿ ಹರಾಜು, ಯಾವ ತಂಡಕ್ಕೆ ಯಾರು ಸೇರ್ಪಡೆಯಾಗುತ್ತಾರೆ ಮತ್ತು ಯಾವ ಆಟಗಾರರು ಕೋಟಿಗಟ್ಟಲೆ ಹಣಕ್ಕೆ ಸೇಲ್ ಆಗುತ್ತಾರೆ ಎಂಬುದನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

error: Content is protected !!