Saturday, November 8, 2025

ಯಾರ್‌ ಹೇಳಿದ್ದು ಮಹಿಳೆಯರ ಕ್ರಿಕೆಟ್‌ ನೋಡೋರಿಲ್ಲ ಅಂತ? ಅತಿ ಹೆಚ್ಚು ವೀಕ್ಷಣೆ, ಇತಿಹಾಸ ಸೃಷ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಿಳೆಯರ ಕ್ರಿಕೆಟ್‌ ನೋಡೋರು ಕಡಿಮೆ ಎಂದು ಯಾರಾದ್ರೂ ಹೇಳಿದ್ರೆ ಈ ಸುದ್ದಿಯನ್ನು ಅವರಿಗೆ ಓದಿಸಿ.

2025 ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದ್ದು ಮಾತ್ರವಲ್ಲದೆ, ವೀಕ್ಷಣೆಯ ವಿಚಾರದಲ್ಲೂ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಮಾಹಿತಿಯ ಪ್ರಕಾರ, ಭಾರತದಲ್ಲಿ ನಡೆದ ಮಹಿಳಾ ವಿಶ್ವಕಪ್ ಆವೃತ್ತಿಯು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 450 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಬಗ್ಗೆ ಹೇಳುವುದಾದರೆ, ಈ ಹೈವೋಲ್ಟೇಜ್ ಕದನ ಸುಮಾರು 21 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು 2024 ರ ಪುರುಷರ ಟಿ20 ವಿಶ್ವಕಪ್‌ನ ಫೈನಲ್‌ಗೆ ಬಹುತೇಕ ಸಮಾನವಾಗಿದೆ.

ಟಿವಿ ದತ್ತಾಂಶದ ಪ್ರಕಾರ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯ 92 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು 2024 ರ ಟಿ20 ವಿಶ್ವಕಪ್ ಫೈನಲ್ ಮತ್ತು 2023 ರ ವಿಶ್ವಕಪ್ ಫೈನಲ್‌ಗೆ ಸಮಾನವಾಗಿದೆ.

error: Content is protected !!