May 29, 2026
Friday, May 29, 2026
spot_img

FOOD | ನುಗ್ಗೆಕಾಯಿಯಿಂದ ಗ್ರೇವಿ ಕೂಡ ಮಾಡಬಹುದು, ಹೇಗೆ ನೋಡಿ..

ಪದಾರ್ಥಗಳು
1 ಈರುಳ್ಳಿ, ಸ್ವಲ್ಪ ಶೇಂಗಾ, ಕಾಯಿತುರಿ, 4 ಹಸಿಮೆಣಸು, ಚಿಕ್ಕದಾದ ಶುಂಠಿ, ಬೆಳ್ಳುಳ್ಳಿ, 5 ನುಗ್ಗೇಕಾಯಿ, ಉಪ್ಪು, ಅರಿಶಿಣ, ಎಣ್ಣೆ, ಸಾಸಿವೆ, ಜೀರಿಗೆ, ಖಾರದಪುಡಿ, ಗರಂಮಸಾಲಾ, ಸಾಂಬಾರ್ ಪುಡಿ.

ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ, ನಂತರ ಈರುಳ್ಳಿ, ಶೇಂಗಾ, ಕಾಯಿತುರಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ, ತಣ್ಣಗಾದ ಬಳಿಕ ರುಬ್ಬಿ ಇಟ್ಟುಕೊಳ್ಳಬೇಕು. ಬಳಿಕ ಅದೇ ಬಾಣಲೆಗೆ ಎಣ್ಣೆ ಹಾಕಿ ನುಗ್ಗೆಕಾಯಿ ಹಾಕಿ, ಉಪ್ಪು, ಅರಿಶಿಣ ಹಾಕಿ ಸ್ವಲ್ಪ ಬೇಯಿಸಬೇಕು.

ನಂತರ ಇದನ್ನು ತೆಗೆದು, ಮತ್ತೆ ಅದೇ ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆ ಹಾಕಬೇಕು. ನಂತರ ಸಣ್ಣ ಉರಿಯಲ್ಲಿ ಬಾಡಿಸಿ, ಆಮೇಲೆ ಉಪ್ಪು, ಖಾರದಪುಡಿ, ಗರಂಮಸಾಲಾ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಬೇಕು. ನಂತರ ಇದಕ್ಕೆ ನುಗ್ಗೇಕಾಯಿ ಹಾಕಿ ಸೌಟಲ್ಲಿ ಚೆನ್ನಾಗಿ ತಿರುಗಿಸಿ ಹದಕ್ಕೆ ಬರುವಂತೆ ಬಾಡಿಸಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !