ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ನಟಿ ಸಂಸದೆ ಕಂಗನಾ ರನೌತ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿತು, ನೀವು ಆ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿಲ್ಲ. ಬದಲಾಗಿ ಅದರಲ್ಲಿ ನಿಮ್ಮದೇ ಕೆಲ ಅಂಶಗಳನ್ನು ಸೇರಿಸಿದ್ದೀರಿ. ನೀವು ಮಸಾಲೆ ಸೇರಿಸಿದ್ದೀರಿ ಎಂದು ಹೇಳಿದರು.
ವಿಚಾರಣೆಯ ಸಮಯದಲ್ಲಿ, ರನೌತ್ ಅವರ ವಕೀಲರು, ಅವರು ತಮ್ಮ ಹೇಳಿಕೆಗಳಿಗೆ ಈಗಾಗಲೇ ಸ್ಪಷ್ಟೀಕರಣವನ್ನು ನೀಡಿದ್ದಾರೆ ಮತ್ತು ಪಂಜಾಬ್‌ನಲ್ಲಿ ಹಾಜರಾಗುವ ಬಗ್ಗೆ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿದ್ದಾರೆ ಎಂದು ವಾದಿಸಿದರು.
ನ್ಯಾಯಾಲಯ, ಅವರು ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು ಎಂದು ಪೀಠ ಸೂಚಿಸಿತು. ನಂತರ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ವಜಾಗೊಳಿಸಲಾಯಿತು.
ರೈತರ ಆಂದೋಲನದ ಸಮಯದಲ್ಲಿ ವೃದ್ಧ ಪ್ರತಿಭಟನಾಕಾರ ಮಹಿಂದರ್ ಕೌರ್ ಅವರ ಬಗ್ಗೆ ರನೌತ್ ಹಂಚಿಕೊಂಡ ಟ್ವೀಟ್‌ನಿಂದ ಈ ವಿವಾದ ಹುಟ್ಟಿಕೊಂಡಿತ್ತು. ಕಂಗನಾ ಆ ಮಹಿಳೆ ನೂರು ರೂ. ಪಡೆದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಳೆ ಎಂಬರ್ಥದಲ್ಲಿ ಕಮೆಂಟ್ ಮಾಡಿದ್ದರು. ಈ ಕುರಿತು ಕಂಗನಾ ಮೇಲೆ ಮಹಿಳೆ ಮಾನಹಾನಿ ಪ್ರಕರಣ ದಾಖಲಿಸಿದ್ದರು.