Sunday, September 7, 2025

FOOD |ಶ್ಯಾವಿಗೆ ಉಪ್ಪಿಟ್ಟು ಈ ರೀತಿ ಟ್ರೈ ಮಾಡಿ! ಮತ್ತೊಮ್ಮೆ ಕೇಳಿ ತಿಂತೀರಾ

ಬೆಳಗ್ಗೆ ತಿಂಡಿಗೆ ರುಚಿಯಾದ ತಿನಿಸನ್ನು ತಯಾರಿಸಬೇಕೆಂದುಕೊಂಡರೆ ಶ್ಯಾವಿಗೆ ಉಪ್ಪಿಟ್ಟು ಅತ್ಯುತ್ತಮ ಆಯ್ಕೆ. ಇದು ಬೇಗನೆ ತಯಾರಾಗುವ ತಿಂಡಿಯಾಗಿದ್ದು, ಮಕ್ಕಳಿಂದ ಹಿಡಿದು ಹಿರಿಯರುತನಕ ಎಲ್ಲರಿಗೂ ಇಷ್ಟವಾಗುತ್ತದೆ.

ಬೇಕಾಗುವ ಪದಾರ್ಥಗಳು:

ಶ್ಯಾವಿಗೆ – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕಡಲೆಬೇಳೆ – 1 ಟೀ ಸ್ಪೂನ್
ಹಸಿಮೆಣಸು – 3
ಕರಿಬೇವು – 1 ಕಡ್ಡಿ
ಈರುಳ್ಳಿ – 1
ಕ್ಯಾರೆಟ್ – 1
ಬಟಾಣಿ – 2 ಟೇಬಲ್ ಸ್ಪೂನ್ (ಐಚ್ಛಿಕ)
ಕೊತ್ತಂಬರಿ ಸೊಪ್ಪು – ಸ್ವಲ್ಪ
ನಿಂಬೆರಸ – 1 ಟೇಬಲ್ ಸ್ಪೂನ್

ತಯಾರಿಸುವ ವಿಧಾನ:

ಮೊದಲು ಶ್ಯಾವಿಗೆಯನ್ನು ಸ್ವಲ್ಪ ಎಣ್ಣೆ ಹಾಕಿ ಪ್ಯಾನ್‌ನಲ್ಲಿ ಹಾಕಿ ಬಣ್ಣ ಬದ್ಲಾಗುವವರೆಗೆ ಹುರಿಯಿರಿ. ಈಗ ಒಂದು ಪಾತ್ರೆಯಲ್ಲಿ ನೀರು ಕುದಿಸಿ, ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಎಣ್ಣೆ ಹಾಕಿ ಶ್ಯಾವಿಗೆಯನ್ನು ಬೇಯಿಸಿ, ನಂತರ ನೀರನ್ನು ಹಾಕಿ ತಣ್ಣಗಾಗಲು ಬಿಡಿ.

ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ, ಕರಿಬೇವು, ಹಸಿಮೆಣಸು ಹಾಕಿ ಫ್ರೈ ಮಾಡಿ. ನಂತರ ಈರುಳ್ಳಿ, ಕ್ಯಾರೆಟ್, ಬಟಾಣಿ ಹಾಕಿ ಸ್ವಲ್ಪ ಹುರಿದುಕೊಳ್ಳಿ. ಈಗ ಬೇಯಿಸಿದ ಶ್ಯಾವಿಗೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಕೊನೆಗೆ ನಿಂಬೆರಸ, ಕೊತ್ತಂಬರಿ ಸೊಪ್ಪು ಸೇರಿಸಿ ಬಿಸಿ ಬಿಸಿ ಉಪ್ಪಿಟ್ಟು ಸರ್ವ್ ಮಾಡಿ.

ಇದನ್ನೂ ಓದಿ