Sunday, January 11, 2026

ಅಚಾನಕ್ ಆಗಿ ಬದಲಾಯಿತು Android ಕಾಲಿಂಗ್ ಸ್ಕ್ರೀನ್? ಯಾಕೆ ?

ಇತ್ತೀಚೆಗೆ ಅನೇಕ ಆಂಡ್ರಾಯ್ಡ್ ಬಳಕೆದಾರರು ತಮ್ಮ ಮೊಬೈಲ್‌ಗಳಲ್ಲಿ ಕಾಲಿಂಗ್ ಸ್ಕ್ರೀನ್ ಅಚಾನಕ್ ಬದಲಾಗಿರುವುದನ್ನು ಗಮನಿಸಿ,ಗಾಬರಿಯಾಗಿಬಿಟ್ಟಿದ್ದಾರೆ. ಫೋನ್ ಕರೆ ಸ್ವೀಕರಿಸುವಾಗ ಅಥವಾ ಕರೆ ಮಾಡುತ್ತಿರುವಾಗ ಕಾಣುವ ಇಂಟರ್‌ಫೇಸ್ ಹಳೆಯದಕ್ಕಿಂತ ವಿಭಿನ್ನವಾಗಿ ಕಾಣುತ್ತಿದೆ. ಇದರಿಂದ ಕೆಲವರು ಗೊಂದಲಕ್ಕೀಡಾಗಿದ್ದಾರೆ. ಆದ್ರೆ ಇದು ಯಾಕೆ ಅಂತ ನಿಮಗೇನಾದ್ರು ಗೊತ್ತಾ? ಇಲ್ಲಿದೆ ನೋಡಿ ಉತ್ತರ.

ಈ ಬದಲಾವಣೆ ಆಂಡ್ರಾಯ್ಡ್ ಸಿಸ್ಟಮ್ ಅಪ್‌ಡೇಟ್ ಹಾಗೂ ಗೂಗಲ್ ಫೋನ್ ಆಪ್‌ನ ನವೀಕರಣದ ಪರಿಣಾಮವಾಗಿದೆ. ಗೂಗಲ್ ತನ್ನ ಫೋನ್ ಆಪ್‌ನ್ನು ಹೆಚ್ಚು ಬಳಕೆದಾರ ಸ್ನೇಹಿ ಹಾಗೂ ಸುಲಭವಾಗಿ ಬಳಸುವಂತಾಗಿಸಲು ಹೊಸ ವಿನ್ಯಾಸವನ್ನು ಪರಿಚಯಿಸಿದೆ. ಇದರಲ್ಲಿ ಕರೆ ಸ್ವೀಕರಿಸುವ ಬಟನ್‌ಗಳ ಗಾತ್ರ, ಬಣ್ಣ ಹಾಗೂ ಸ್ಥಾನದ ಬದಲಾವಣೆ ಸೇರಿದ್ದು, ಸ್ಪಷ್ಟ ದೃಶ್ಯ ಅನುಭವ ನೀಡಲು ಪ್ರಯತ್ನಿಸಲಾಗಿದೆ.

AI ಆಧಾರಿತ ವೈಶಿಷ್ಟ್ಯಗಳನ್ನು ಸೇರಿಸುವ ಮೂಲಕ ಸ್ಪ್ಯಾಮ್ ಕರೆಗಳನ್ನು ಗುರುತಿಸುವ ವ್ಯವಸ್ಥೆಯನ್ನು ಸುಧಾರಿಸಲಾಗಿದೆ. ಫೋನ್ ಆಪ್ ಈಗ ಕಸ್ಟಮೈಸ್ ಮಾಡಬಹುದಾದ ಹಿನ್ನಲೆ, ಕಲರ್ ಥೀಮ್ ಹಾಗೂ ಸುಧಾರಿತ ಕಾಲ್ ಲಾಗ್‌ಗಳನ್ನು ಒದಗಿಸುತ್ತಿದೆ. ಹೀಗಾಗಿ ಬಳಕೆದಾರರಿಗೆ ತಮ್ಮ ಕಾಲಿಂಗ್ ಅನುಭವವನ್ನು ವೈಯಕ್ತಿಕಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹೊಸ ಇಂಟರ್‌ಫೇಸ್ ಕೆಲವರಿಗೆ ಅಸಮಾಧಾನ ತಂದಿದ್ದರೂ, ಇದು ಹಂತ ಹಂತವಾಗಿ ಎಲ್ಲಾ ಆಂಡ್ರಾಯ್ಡ್ ಸಾಧನಗಳಿಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಫೋನ್ ಆಪ್ ಸೆಟ್ಟಿಂಗ್‌ನಲ್ಲಿ ಹಳೆಯ ವಿನ್ಯಾಸವನ್ನು ಪಡೆಯುವ ಆಯ್ಕೆಯೂ ಕೆಲವು ಸಾಧನಗಳಲ್ಲಿ ದೊರೆಯುವ ಸಾಧ್ಯತೆಯಿದೆ.

Related articles

Comments

LEAVE A REPLY

Please enter your comment!
Please enter your name here

ಇತರರಿಗೂ ಹಂಚಿ

Latest articles

Newsletter

error: Content is protected !!