January19, 2026
Monday, January 19, 2026
spot_img

ಇಂಡಿಯನ್‌ ನೇವಿಗೆ ಆನೆಬಲ! INS ಉದಯಗಿರಿ, INS ಹಿಮಗಿರಿ ಯುದ್ಧನೌಕೆಗಳು ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ಬಂದಿದ್ದು, ನೌಕಾಪಡೆಯು ಇಂದು ಏಕಕಾಲದಲ್ಲಿ ಎರಡು ನೀಲಗಿರಿ-ವರ್ಗದ ರಹಸ್ಯ ಮಾರ್ಗದರ್ಶಿ-ಕ್ಷಿಪಣಿ ಯುದ್ಧನೌಕೆಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ.

ಇತ್ತೀಚೆಗಷ್ಟೇ INS ತಮಾಲ್ ಯುದ್ಧ ನೌಕೆಯನ್ನು ಭಾರತೀಯ ನೌಕಾಪಡೆ ಸೇರಿಸಿಕೊಂಡಿತ್ತು. ಇದೀಗ ಮತ್ತೆರಡು ಯುದ್ಧ ನೌಕೆಗಳು ಅಂದರೆ ಐಎನ್ಎಸ್ ಉದಯಗಿರಿ ಮತ್ತು ಐಎನ್ಎಸ್ ಹಿಮಗಿರಿ ಯುದ್ಧನೌಕೆಗಳು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.

ಸೇನಾ ಮೂಲಗಳ ಪ್ರಕಾರ, ‘ಎರಡು ಯುದ್ಧನೌಕೆಗಳು, ಈ ವರ್ಷದ ಆರಂಭದಲ್ಲಿ INS ನೀಲಗಿರಿಯನ್ನು ನಿಯೋಜಿಸಲಾದ ಪ್ರಾಜೆಕ್ಟ್ 17 ಆಲ್ಫಾ (P-17A) ನ ಭಾಗವಾಗಿದೆ’ ಎಂದು ಹೇಳಲಾಗಿದೆ.

ಇದೇ ಮೊದಲ ಬಾರಿಗೆ ಎರಡು ಪ್ರತಿಷ್ಠಿತ ಭಾರತೀಯ ಶಿಪ್‌ಯಾರ್ಡ್‌ಗಳಿಂದ, ಎರಡು ಪ್ರಮುಖ ಯುದ್ಧನೌಕೆಗಳನ್ನು ಒಂದೇ ಸಮಯದಲ್ಲಿ ನಿಯೋಜನೆ ಮಾಡಲಾಗಿದೆ. ಇದರೊಂದಿಗೆ ದೇಶದ ಕೈಗಾರಿಕಾ-ತಾಂತ್ರಿಕ ಸಾಮರ್ಥ್ಯಕ್ಕೆ ಉದಾಹರಣೆಯಾಗಿ ಪ್ರಾದೇಶಿಕ ಶಕ್ತಿ ಸಮತೋಲನ ಪ್ರದರ್ಶಿಸುವ ಮೂರು ಯುದ್ಧನೌಕೆಗಳ ಸ್ಕ್ವಾಡ್ರನ್‌ನನ್ನು ಭಾರತ ಹೊಂದಿದಂತಾಗಿದೆ.

ಎರಡೂ ಹಡಗುಗಳನ್ನು 200ಕ್ಕೂ ಹೆಚ್ಚು MSME ಗಳನ್ನು ವ್ಯಾಪಿಸಿರುವ ಕೈಗಾರಿಕಾ ಪರಿಸರ ವ್ಯವಸ್ಥೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಕೈಗಾರಿಕಾ ಪ್ರದೇಶ ಸುಮಾರು 4,000 ನೇರ ಉದ್ಯೋಗಗಳು ಮತ್ತು 10,000ಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳನ್ನು ಬೆಂಬಲಿಸುತ್ತದೆ.

ಐಎನ್ಎಸ್ ಉದಯಗಿರಿಯನ್ನು ಮುಂಬೈನಲ್ಲಿ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (MDL) ನಿರ್ಮಿಸಿದೆ ಮತ್ತು ಇದು ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದ 100ನೇ ಹಡಗು ಎಂಬ ಖ್ಯಾತಿಯನ್ನು ಹೊಂದಿದೆ. ಅದೇ ರೀತಿ ಐಎನ್ಎಸ್ ಹಿಮಗಿರಿ ಕೋಲ್ಕತ್ತಾದಲ್ಲಿ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಎಂಜಿನಿಯರ್ಸ್ (GRSE) ನಿರ್ಮಿಸುತ್ತಿರುವ P-17A ಹಡಗುಗಳಲ್ಲಿ ಮೊದಲನೆಯದಾಗಿದೆ.

Must Read

error: Content is protected !!