January21, 2026
Wednesday, January 21, 2026
spot_img

ಇಂದಿರಾ ಗಾಂಧಿ ದಾಖಲೆ ಮುರಿದ ಮೋದಿ! ದೇಶದ 2ನೇ ಅತಿ ಸುದೀರ್ಘ ಪ್ರೈಮ್‌ ಮಿನಿಸ್ಟರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ದಾಖಲೆ ಮುರಿದಿದ್ದಾರೆ. ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಎರಡನೇ ವ್ಯಕ್ತಿ ಮೋದಿ.

4,078 ದಿನಗಳ ಕಾಲ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿದ್ದ, ಪ್ರಧಾನಿ ಮೋದಿ ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಬೀಗಿದ್ದಾರೆ.‌ ಪ್ರಧಾನಿ ನರೇಂದ್ರ ಮೋದಿ ಇವತ್ತಿಗೆ 4,078 ದಿನಗಳನ್ನು ಪೂರೈಸಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ 4077 ದಿನಗಳ ಕಾಲ ಪ್ರಧಾನಿ ಆಗಿದ್ದರು.

1966ರ ಜನವರಿ 24 ರಿಂದ 1977ರ ಮಾರ್ಚ್ 24ರ ವರೆಗೆ ಇಂದಿರಾ ಗಾಂಧಿಯವರು 4,077 ದಿನಗಳ ಕಾಲ ಪ್ರಧಾನಿ ಆಗಿದ್ದರು. ಅಲ್ಲದೇ, ಸತತ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಎರಡನೇ ಪ್ರಧಾನಿಯಾಗಿ ಮೋದಿ ದಾಖಲೆ ಬರೆದರೆ, ಮೊದಲ ಸ್ಥಾನದಲ್ಲಿ ಜವಾಹರಲಾಲ್ ನೆಹರೂ ದಾಖಲೆ ಇದೆ.

Must Read