January17, 2026
Saturday, January 17, 2026
spot_img

ಇಸ್ಪೀಟ್ ಅಡ್ಡೆ ಮೇಲೆ ದಾಳಿ! ಬರೋಬ್ಬರಿ 49 ಲಕ್ಷ ಹಣ, 4 ಕಾರು ಸೀಝ್‌, 19 ಮಂದಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನೆಡೆಸಿ 49 ಲಕ್ಷ ನಗದು, ನಾಲ್ಕು ಕಾರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಎಸ್ಪಿ ದೀಪನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಗೀತಾ ಪಾಟೀಲ್ ನೇತ್ರತ್ವದ ತಂಡ ಖಚಿತ ಮಾಹಿತಿ ಆಧರಿಸಿ ಯಲ್ಲಾಪುರ ಹೆದ್ದಾರಿಯ ಬೈರುಂಬೆಯ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಗಸಾಲ ಗ್ರಾಮದ ಹಾವೇರಿ ಮೂಲದ ವೈದ್ಯರೋರ್ವರ ಮಾಲೀಕತ್ವದ ವಿಆರ್‌ಆರ್ ಹೋಮ್ ಸ್ಟೇ ಮೇಲೆ ದಾಳಿ ನಡೆಸಿತ್ತು.

ಈ ವೇಳೆ ಅಕ್ರಮವಾಗಿ ಅಂದರ್ ಬಾಹರ್ ಆಡುತಿದ್ದ 19 ಜನರನ್ನ ವಶಕ್ಕೆ ಪಡೆದು 49,50,436 ಲಕ್ಷ ನಗದು, ನಾಲ್ಕು ಕಾರುಗಳು ಹಾಗೂ 15 ಮೊಬೈಲ್, ಇಸ್ಪೀಟ್ ಕಾರ್ಡ್‌ಗಳನ್ನ ವಶಕ್ಕೆ ಪಡೆದಿದ್ದಾರೆ.  ಬಂಧಿತರು ಹಾವೇರಿ, ದಾವಣಗೆರೆ ಮೂಲದವರಾಗಿದ್ದು ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Content is protected !!