Monday, October 20, 2025

ಕಲಬುರಗಿಯ ಸೇಡಂನಲ್ಲಿ RSS ಪಥಸಂಚಲನಕ್ಕೆ ಅಡ್ಡಿ: ಸ್ವಯಂಸೇವಕರ ಬಂಧನ

ಹೊಸ ದಿಗಂತ ವರದಿ,ಕಲಬುರಗಿ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲಬುರಗಿ ವತಿಯಿಂದ ಹಮ್ಮಿಕೊಂಡಿದ್ದ ಪಥಸಂಚಲನಕ್ಕೆ ಕೊನೆ ಘಳಿಗೆ ಅನುಮತಿ ಇಲ್ಲವೆಂದು, ಪದಸಂಚಲನವನ್ನು ತಡೆದಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

ಜಿಲ್ಲೆಯ ಸೇಡಂ ತಾಲೂಕಿನ ಮಾತೃ ಛಾಯಾ ಆವರಣದಿಂದ ಪ್ರಾರಂಭವಾದ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ನಿಗದಿಯಂತೆ ಆಯೋಜಿಸಲಾಗಿತ್ತು. ಇದಕ್ಕಾಗಿ ಅನುಮತಿ ಸಹ ಪಡೆಯಲಾಗಿತ್ತು. ಆದರೆ, ಏಕಾಏಕಿ ಕೊನೆ ಗಳಿಗೆಯಲ್ಲಿ ಪಥಸಂಚಲನಕ್ಕೆ ಅನುಮತಿ ಇಲ್ಲ ಎಂದು ತಾಲೂಕಿನ ಆಡಳಿತ ಗಣವೇಷಧಾರಿ ಪಥಸಂಚಲನಕ್ಕೆ ತಡೆ ಹಿಡಿದು, ನೂರಾರು ಸ್ವಯಂಸೇವಕರನ್ನು ಬಂಧಿಸಿದೆ.

ಆದರೆ, ರಾಷ್ಟ್ರೀಯ ಸ್ವಯಂಸೇವಕಿಂದ ನಡೆದ ಪಥಸಂಚಲನದಲ್ಲಿ ಸಾವಿರಾರು ಸ್ವಯಂಸೇವಕರು ಗಣವೇಷದಲ್ಲಿ ಭಾಗಿಯಾಗಿದ್ದು,೨೦೦ ಕ್ಕೂ ಅಧಿಕ ಪೋಲಿಸರು ಅವರನ್ನು ತಡೆಯಲು ಸಾಧ್ಯವಾಗಿಲ್ಲ.ಹೀಗಾಗಿ ಪೋಲಿಸರು ಪಥಸಂಚಲನಕ್ಕೆ ತಡೆಯೊಡ್ಡಿದರು, ಸಾವಿರಾರು ಸಂಖ್ಯೆಯಲ್ಲಿದ್ದ ಸ್ವಯಂಸೇವಕರು ಪಥಸಂಚಲನ ಮುಂದುವರೆಸಿದ್ದಾರೆ.

error: Content is protected !!