January20, 2026
Tuesday, January 20, 2026
spot_img

ನಾನು ಕೇಂದ್ರಕ್ಕೆ ಹೋಗುವುದಿಲ್ಲ, ರಾಜ್ಯ ರಾಜಕೀಯದಲ್ಲೇ ಇರುತ್ತೇನೆ: ಸಿಎಂ ಸಿದ್ದು ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನು ಕೇಂದ್ರಕ್ಕೆ ಹೋಗುವುದಿಲ್ಲ. ರಾಜ್ಯ ರಾಜಕೀಯದಲ್ಲೇ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ರಸಗೊಬ್ಬರ ಅಭಾವದ ಚರ್ಚೆ ವೇಳೆ ಸಿಎಂ ಈ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ನನಗೆ ಸಂಸತ್‌ಗೆ ಹೋಗಬೇಕು ಎಂಬ ಒಲವು ಇತ್ತು.‌ ಈಗ ಅದು ಇಲ್ಲ, ಎರಡು ಸಲ ನನ್ನ ಜನ ತಿರಸ್ಕರಿಸಿದ್ದಾರೆ. ನನಗೆ ಈಗ ಸಂಸತ್‌ಗೆ ಹೋಗುವ ಆಸೆ ಇಲ್ಲ.‌ ಎಲ್ಲರಿಗೂ ಸಂಸತ್ ಪ್ರವೇಶ ಮಾಡುವ ಆಸೆ ಇರುತ್ತದೆ ಎಂದರು. ಆಸೆ ಇರುವುದು ತಪ್ಪೇನಿಲ್ಲ. ಆಸೆ ಇರಬೇಕು, ದುರಾಸೆ ಇರಬಾರದು.‌ ಆದರೆ ನನಗೆ ಈಗ ಸಂಸತ್‌ಗೆ ಹೋಗುವ ಆಸೆ ಇಲ್ಲ. ನಾನು ಕೇಂದ್ರಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

Must Read