ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶನ ಹಬ್ಬ ಬಹುತೇಕ ಭಾರತದಾದ್ಯಂತ ಆಚರಿಸಲ್ಪಡುವುದರಿಂದ ಹೆಚ್ಚಿನ ಕಡೆ ರಜೆ ಇದೆ. ಆದರೆ, ಬ್ಯಾಂಕುಗಳು ಮತ್ತು ಷೇರು ಬಜಾರುಗಳಿಗೆ ಆಗಸ್ಟ್ 27, ಬುಧವಾರ ರಜೆ ಇರುತ್ತದಾ?
ಆಗಸ್ಟ್ 27, ಬುಧವಾರದಂದು ಗಣೇಶ ಹಬ್ಬದ ಪ್ರಯುಕ್ತ ರಾಷ್ಟ್ರೀಯ ರಜಾ ದಿನವಾಗಿ ಘೋಷಿಸಲಾಗಿದೆ. ಆರ್ಬಿಐ ಕ್ಯಾಲಂಡರ್ ಪ್ರಕಾರವೂ ಬಹುತೇಕ ಎಲ್ಲಾ ಪ್ರದೇಶಗಳಲ್ಲೂ ವಿನಾಯಕ ಚತುರ್ಥಿಗೆ ರಜೆ ಇರುತ್ತದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ಗಳು ವಿನಾಯಕ ಚತುರ್ಥಿಗೆ ರಜೆ ನೀಡಿವೆ. ಈ ಬುಧವಾರ ಯಾವುದೇ ಟ್ರೇಡಿಂಗ್ ನಡೆಯಲು ಅವಕಾಶ ಇರುವುದಿಲ್ಲ. ನೀವು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಬಹುದಾದರೂ, ಅವು ಎಕ್ಸಿಕ್ಯೂಟ್ ಆಗುವುದು ಗುರುವಾರ ಬೆಳಗ್ಗೆಯೇ.
ಆಗಸ್ಟ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಈಗ ವಿನಾಯಕ ಚತುರ್ಥಿಗೆ ಷೇರು ಮಾರುಕಟ್ಟೆ ಬಂದ್ ಆಗಿದೆ. ಸೆಪ್ಟೆಂಬರ್ನಲ್ಲಿ ಶನಿವಾರ ಮತ್ತು ಭಾನುವಾರ ಬಿಟ್ಟರೆ ಬೇರೆ ದಿನ ಪೇಟೆಗೆ ರಜೆ ಇರುವುದಿಲ್ಲ. ಅಕ್ಟೋಬರ್ನಲ್ಲಿ ಬರೋಬ್ಬರಿ ಮೂರು ದಿನ ರಜೆ ಇದೆ.