January17, 2026
Saturday, January 17, 2026
spot_img

ಮದುವೆಗೆ ಒತ್ತಾಯಿಸಿದ ಮಹಿಳೆ, ಸಿಟ್ಟಿನಲ್ಲಿ ಆಕೆಯಿಂದು ಕೊಂದು ಪೀಸ್‌ ಪೀಸ್‌ ಮಾಡಿದ ಪ್ರಿಯಕರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉತ್ತರ ಪ್ರದೇಶದ ಝಾನ್ಸಿಯಲ್ಲಿ, ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬಳ ದೇಹದ ತುಂಡುಗಳು ಚೀಲದಲ್ಲಿ ಪತ್ತೆಯಾಗಿದೆ. ಈ ಕೊಲೆಯನ್ನು ಪ್ರಿಯಕರನೇ ಮಾಡಿದ್ದಾನೆ ಎನ್ನುವ ವಿಷಯ ಇದೀಗ ಬಯಲಾಗಿದೆ.

ಮದುವೆ ಮಾಡಿಕೊಳ್ಳುವಂತೆ ಮಹಿಳೆ ಒತ್ತಾಯಿಸುತ್ತಿದ್ದಳು. ಇದರಿಂದಾಗಿ ಮಾಜಿ ಪ್ರಧಾನ್ ಆಕೆಯ ಕತ್ತು ಹಿಸುಕಿ ಕೊಂದು ಶವವನ್ನು ಏಳು ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಎಸೆದಿದ್ದಾನೆ. ಈ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.

ಆಗಸ್ಟ್ 13ರಂದು ತೋಡಿ ಫತೇಪುರ್ ಪ್ರದೇಶದ ಕಿಶೋರ್‌ಪುರ್ ಗ್ರಾಮದಲ್ಲಿರುವ ತನ್ನ ಜಮೀನಿಗೆ ರೈತನೊಬ್ಬ ಹೋಗಿದ್ದ. ಕೆಟ್ಟ ವಾಸನೆ ಬಂದ ನಂತರ, ಹತ್ತಿರದ ಕೆರೆಯೊಳಗೆ ನೋಡಿದಾಗ ಅದರಲ್ಲಿ ಎರಡು ಚೀಲಗಳು ಕಂಡಿವೆ. ಈ ಬಗ್ಗೆ ಆತ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಗ್ರಾಮಸ್ಥರ ಸಹಾಯದಿಂದ ಚೀಲಗಳನ್ನು ಬಾವಿಯಿಂದ ಹೊರತೆಗೆದಿದ್ದರು.

ಘಟನಾ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು ಚೀಲಗಳನ್ನು ತೆರೆದಾಗ ಜನರು ದಿಗ್ಭ್ರಮೆಗೊಂಡರು. ಎರಡೂ ಚೀಲಗಳಲ್ಲಿ ಮಹಿಳೆಯ ದೇಹದ ತುಂಡುಗಳಿದ್ದವು. ಎರಡೂ ಕೈಗಳು, ಎರಡೂ ಕಾಲುಗಳು ಮತ್ತು ಮಹಿಳೆಯ ತಲೆ ಕಾಣೆಯಾಗಿತ್ತು. ತದನಂತರ ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದಾರೆ. ಸದ್ಯ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಶೋಧ ಮುಂದುವರಿದಿದೆ.

Must Read

error: Content is protected !!