Saturday, October 4, 2025

ಹೊಟೇಲ್‌, ಬಾರ್‌ಗಳಲ್ಲಿ Smoking zone ಕಡ್ಡಾಯ, ಇಲ್ಲವಾದ್ರೆ ಲೈಸೆನ್ಸ್‌ ಕ್ಯಾನ್ಸಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಮೋಕಿಂಗ್ ಝೋನ್’ಇಲ್ಲದ ಹೋಟೆಲ್, ಬಾರ್‌ ಗಳಿಗೆ ಪರವಾನಗಿ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಈ ಸಂಬಂಧ ಬಿಬಿಎಂಪಿ ಆರೋಗ್ಯ ಇಲಾಖೆ ಬಾರ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ ಗಳಂತಹ 412 ಮಾಲೀಕರಿಗೆ ನೋಟಿಸ್ ಕಳುಹಿಸಿದ್ದು, ಸ್ಮೋಕಿಂಗ್ ಝೋನ್ ನಿರ್ಮಿಸುವಂತೆ ಸೂಚಿಸಿದೆ.

ನೋಟಿಸ್ ನೀಡಿದ ದಿನಾಂಕದಿಂದ ಒಂದು ವಾರದ ಕಾಲಾವಕಾಶವನ್ನೂ ನೀಡಿದ್ದು, ತಪ್ಪಿದಲ್ಲಿ ಟ್ರೇಡ್ ಲೈಸೆನ್ಸ್ ಅಮಾನತುಗೊಳಿಸಲಾಗುವುದು ಎಂದು ಸೂಚಿಸಲಾಗಿದೆ. ಜೂನ್ 22, 2022 ರ ಸುಪ್ರೀಂ ಕೋರ್ಟ್ ನಿರ್ದೇಶನ ಮತ್ತು ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆ 2003 (COTPA) ಸೆಕ್ಷನ್ 4 ರ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.

ಇದರಲ್ಲಿ ಬಾರ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು 30 ಅಥವಾ ಅದಕ್ಕಿಂತ ಹೆಚ್ಚಿನ ಆಸನಗಳನ್ನು ಹೊಂದಿರುವ ಯಾವುದೇ ಸಂಸ್ಥೆಗಳು ಧೂಮಪಾನ ಮಾಡಲು ಪ್ರತ್ಯೇಕ ಪ್ರದೇಶವನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ.