ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಆಯೋಗದ ವಿರುದ್ಧ ಮತಗಳವು ಆರೋಪ ಮಾಡಿರುವ ರಾಹುಲ್ ಗಾಂಧಿ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಗುಜರಾತ್‌ನ ಪರಿಚಯವಿಲ್ಲದ 10 ರಾಜಕೀಯ ಪಕ್ಷಗಳು 5 ವರ್ಷಗಳಲ್ಲಿ 4,300 ಕೋಟಿ ರೂ. ದೇಣಿಗೆ ಪಡೆದುಕೊಂಡಿವೆ. ಈ ಪಕ್ಷಗಳು ಕಡಿಮೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಕಡಿಮೆ ಮತಗಳನ್ನು ಗಳಿಸಿದ್ದರೂ, ಲೆಕ್ಕಪರಿಶೋಧನಾ ವರದಿಗಳಲ್ಲಿ ದೊಡ್ಡ ಮೊತ್ತದ ವೆಚ್ಚವನ್ನು ತೋರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸುತ್ತಾ? ಈ ಬಗ್ಗೆಯೂ ಅಫಿಡವಿಟ್ ಕೇಳ್ತಿರಾ? ಅಂತ ಎಕ್ಸ್ ಖಾತೆಯಲ್ಲಿ ರಾಗಾ ಆಯೋಗಕ್ಕೆ ಸವಾಲ್ ಹಾಕಿದ್ದಾರೆ.
3 ಪ್ರಮುಖ ಚುನಾವಣೆಗಳಲ್ಲಿ ಈ ಪಕ್ಷಗಳು ಒಟ್ಟಾಗಿ ಕಣಕ್ಕಿಳಿಸಿದ್ದು ಕೇವಲ 43 ಅಭ್ಯರ್ಥಿಗಳನ್ನು ಮಾತ್ರ. ಈ ಎಲ್ಲಾ ಅಭ್ಯರ್ಥಿಗಳು ಸೇರಿ ಗಳಿಸಿದ್ದು ಕೇವಲ 54,069 ಮತಗಳು ಎಂದಿದ್ದಾರೆ.