Monday, September 8, 2025

ನಾಗರಪಂಚಮಿ | ಈ ದಿನದಂದು ಶಿವಲಿಂಗಕ್ಕೆ ಈ ಪದಾರ್ಥಗಳನ್ನು ಅರ್ಪಿಸಿ

ಇಂದು 2025ರ ನಾಗರ ಪಂಚಮಿ ಶುಭ ದಿನ. ಈ ದಿನವನ್ನು ಹಾವುಗಳ ಪೂಜೆಗೆ ಉತ್ತಮ ದಿನವೆಂದು ಪರಿಗಣಿಸಲಾಗುತ್ತದೆ. ಕಾಲಸರ್ಪ ದೋಷದಿಂದ ಮುಕ್ತಿಯನ್ನು ಹೊಂದುವುದಕ್ಕಾಗಿ ಈ ದಿನವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.

ಇಂದು ನಾಗಗಳನ್ನು ಪೂಜಿಸುವುದು ಮಾತ್ರವಲ್ಲ, ಶಿವನನ್ನು ಕೂಡ ಪೂಜಿಸುವ ಸಂಪ್ರದಾಯವಿದೆ. ನಾಗರ ಪಂಚಮಿ ದಿನದಂದು ನಾಗರನ್ನು ಮತ್ತು ಶಿವನನ್ನು ಪೂಜಿಸುವುದರ ಜೊತೆಗೆ ಶಿವಲಿಂಗಕ್ಕೆ ಕೆಲವೊಂದು ವಸ್ತುಗಳನ್ನು ಅರ್ಪಿಸಬೇಕು. ನಾಗರ ಪಂಚಮಿ ದಿನ ಶಿವಲಿಂಗಕ್ಕೆ ಯಾವೆಲ್ಲಾ ವಸ್ತುಗಳನ್ನು ಅರ್ಪಿಸಿದರೆ ಕಾಳ ಸರ್ಪ ದೋಷ ನಿವಾರಣೆಯಾಗುತ್ತದೆ ಎನ್ನಲಾಗಿದೆ.

ಯಾವೆಲ್ಲಾ ವಸ್ತುಗಳು? ಇಲ್ಲಿದೆ ಡೀಟೇಲ್ಸ್‌..

ಶಿವನಿಗೆ ಪ್ರಿಯವಾದ ವಸ್ತುಗಳಲ್ಲಿ ಧಾತುರಾ ಕೂಡ ಒಂದಾಗಿದೆ. ನಾಗರ ಪಂಚಮಿ ದಿನದಂದು ಶಿವಲಿಂಗಕ್ಕೆ ನಾವು ಧಾತುರಾವನ್ನು ಅರ್ಪಿಸುವುದರಿಂದ ಶಿವನು ನಿಮ್ಮ ಮೇಲೆ ಪ್ರಸನ್ನನಾಗುತ್ತಾನೆ.

ಇಂದು ನಾಗ ದೇವರನ್ನು ಪೂಜಿಸಿ, ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಇಡಬೇಕು. ಬಿಲ್ವಪತ್ರೆಯಲ್ಲಿ ಕಡ್ಡಾಯವಾಗಿ ಮೂರು ಎಲೆಗಳು ಇರಲೇಬೇಕು.

ನಾಗರ ಪಂಚಮಿ ದಿನದಂದು ಶಿವಲಿಂಗಕ್ಕೆ ನಾವು ಅರ್ಪಿಸಬೇಕಾದ ಇನ್ನೊಂದು ಪ್ರಮುಖ ವಸ್ತುವೆಂದರೆ ಅದುವೇ, ಅಕ್ಷತೆ ಮತ್ತು ಶ್ರೀಗಂಧವಾಗಿದೆ.

ನಾಗರ ಪಂಚಮಿ ದಿನದಂದು ನಾವು ಶಿವಲಿಂಗವನ್ನು ಪೂಜಿಸಿ, ಹಾಲನ್ನು ಅರ್ಪಿಸಬೇಕು

ಇದನ್ನೂ ಓದಿ