Wednesday, September 3, 2025

ಬಾಕ್ಸ್ ಆಫೀಸ್‌ ನಲ್ಲಿ ದಾಖಲೆ ಬರೆದ ‘ಸೈಯಾರ’ : ಆರು ದಿನದಲ್ಲೇ 150 ಕೋಟಿ ಕಲೆಕ್ಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಕ್ಸ್ ಆಫೀಸ್‌ ನಲ್ಲಿ ದಾಖಲೆ ಬರೆದ ‘ಸೈಯಾರ’ : ಆರು ದಿನದಲ್ಲೇ 150 ಕೋಟಿ ಕಲೆಕ್ಷನ್

ಹೊಸ ಮುಖಗಳಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯಿಸಿದ ಹಿಂದಿ ಸಿನಿಮಾ ಸೈಯಾರ ಅನಿರೀಕ್ಷಿತ ಯಶಸ್ಸನ್ನು ದಾಖಲಿಸಿದೆ. ಚಿತ್ರ ರಿಲೀಸ್ ಆದ ಆರು ದಿನಗಳಲ್ಲೇ ದೇಶೀಯವಾಗಿ 150 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿರುವುದು ವಿಶಿಷ್ಟ. ಪ್ರೇಮ, ವ್ಯಥೆ ಹಾಗೂ ಭಾವುಕತೆಯ ಪ್ರಭಾವದಿಂದಾಗಿ ಸಿನಿಮಾ ವೀಕ್ಷಿಸಿರುವ ಹಲವರು ಥಿಯೇಟರ್‌ಗಳಲ್ಲಿ ಅಳುತ್ತಾ ಕಾಣಿಸಿಕೊಂಡಿದ್ದು, ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಚಿತ್ರ ಬಿಡುಗಡೆಯಾಗುವ ಮೊದಲು ‘ಸೈಯಾರ’ ಬಗ್ಗೆ ಹೆಚ್ಚು ಮಾತುಕತೆ ನಡೆದಿರಲಿಲ್ಲ. ಚಿತ್ರದಲ್ಲಿ ಹೊಸ ಮುಖಗಳಿರುವ ಕಾರಣದಿಂದಾಗಿ ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆಯೇ ಇರಲಿಲ್ಲ. ಆದರೆ ಚಿತ್ರ ಬಿಡುಗಡೆಯಾದ ನಂತರ, mouth publicity‌ಯಿಂದಾಗಿ ಅದರ ಬಗ್ಗೆ ಜನತೆ ಹೆಚ್ಚು ಪರಿಚಯವಾಯಿತು. ಟ್ರೇಲರ್‌ಗೆ ಒಗ್ಗದ ಪ್ರೇಕ್ಷಕರು ಕೂಡ ನಂತರ ಥಿಯೇಟರ್‌ಗಳತ್ತ ಮುಖಮಾಡಿದರು. ಕೇವಲ ಕಥೆಯ ಶಕ್ತಿಯಿಂದ ಹಾಗೂ ಭಾವುಕತೆಯ ಗಂಭೀರತೆಯಿಂದ ಚಿತ್ರವು ಈ ಮಟ್ಟದ ಯಶಸ್ಸು ಕಂಡಿರುವುದು ವಿಶ್ಲೇಷಕರನ್ನೂ ಅಚ್ಚರಿಗೊಳಿಸಿದೆ.

ಈವರೆಗೆ ಸೈಯಾರ 153.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾನುವಾರ 35 ಕೋಟಿ ರೂಪಾಯಿ, ಸೋಮವಾರ 24 ಕೋಟಿ, ಮಂಗಳವಾರ 25 ಕೋಟಿ ಹಾಗೂ ಬುಧವಾರ 21 ಕೋಟಿ ರೂಪಾಯಿ ಬಾಕ್ಸ್ ಆಫೀಸ್‌ನಲ್ಲಿ ಹರಿದು ಬಂದಿವೆ. ಈ ಮಾದರಿಯ ಲಾಭದ ಮೂಲಕ ಚಿತ್ರ 300 ಕೋಟಿ ರೂಪಾಯಿಯ ಗುರಿ ತಲುಪಲಿರುವ ನಿರೀಕ್ಷೆಯಿದೆ.

ಈ ಎಲ್ಲದರ ನಡುವೆ ‘ಸೈಯಾರ’ ಈಗ ಬಾಕ್ಸ್ ಆಫೀಸ್‌ನ ಹೊಸ ಸೆನ್ಸೇಷನ್ ಆಗಿದ್ದು, ಹೊಸ ಮುಖಗಳಿಂದ ಕೂಡಿದ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬಹುದು ಎಂಬುದಕ್ಕೆ ಈ ಚಿತ್ರ ಉದಾಹರಣೆಯಾಗಿದೆ.

ಇದನ್ನೂ ಓದಿ