Monday, January 12, 2026

ಬಾನು ಮುಷ್ತಾಕ್‌ಗೆ ಚಾಮುಂಡಿ ತಾಯಿ ಮೇಲೆ ನಂಬಿಕೆ ಇದ್ದರೆ ಉದ್ಘಾಟನೆಗೆ ಬರಲಿ: ಜಿಟಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಾಹಿತಿ ಬಾನು ಮುಷ್ತಾಕ್‌ಗೆ ಚಾಮುಂಡಿ ತಾಯಿಯ ಮೇಲೆ ನಂಬಿಕೆ ಇದ್ದರೆ ಉದ್ಘಾಟನೆಗೆ ಬರುತ್ತಾರೆ. ನಂಬಿಕೆ ಇಲ್ಲದಿದ್ದರೆ ಬರಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ದಸರಾ ಉದ್ಘಾಟಕರ ಆಯ್ಕೆ ಅಧಿಕಾರವನ್ನು ಸಿಎಂ ಕೊಟ್ಟಿದ್ದೆವು. ಅದು ಅವರ ಪರಮ ಅಧಿಕಾರ. ಸಿಎಂ ತಮ್ಮ ಅಧಿಕಾರ ಬಳಸಿ ಆಯ್ಕೆ ಮಾಡಿದ್ದಾರೆ. ಅದರ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ತಪ್ಪಿಸ್ಥರನ್ನ ನೇಣಿಗೆ ಹಾಕಬೇಕು. ಯಾರಿಂದಲೂ ಧರ್ಮಸ್ಥಳ ಹಾಗೂ ವಿರೇಂದ್ರ ಹೆಗೆಡೆ ಅವರಿಗೆ ಕೆಟ್ಟ ಹೆಸರಲು ಸಾಧ್ಯವಿಲ್ಲ. ಅವರನ್ನ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಇದು ಎಲ್ಲಾ ಕನ್ನಡಿಗರಿಗೆ ನೋವಾಗಿದೆ. ಅವರಿಗೆ ಇಡೀ ಪ್ರಪಂಚಾದ್ಯಂತ ಭಕ್ತರಿದ್ದಾರೆ ಎಂದು ತಿಳಿಸಿದ್ದಾರೆ.

Related articles

Comments

LEAVE A REPLY

Please enter your comment!
Please enter your name here

ಇತರರಿಗೂ ಹಂಚಿ

Latest articles

Newsletter

error: Content is protected !!