Thursday, September 4, 2025

ರಷ್ಯಾದ ತೈಲ ಖರೀದಿ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಭಾರತ ಫಂಡಿಂಗ್‌ ಮಾಡ್ತಿದೆ ಎಂದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಭಾರತವು ಪರಿಣಾಮಕಾರಿಯಾಗಿ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಕಟವರ್ತಿ ಟೀಕಿಸಿದ್ದಾರೆ.

ಶ್ವೇತಭವನದ ಉಪ ಮುಖ್ಯಸ್ಥನೂ ಆಗಿರುವ ಸ್ಟೀಫನ್ ಮಿಲ್ಲರ್, ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಸುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ರಷ್ಯಾಕ್ಕೆ ಹಣಕಾಸು ನೆರವು ಒದಗಿಸುತ್ತಿದೆ.

ರಷ್ಯಾದಿಂದ ತೈಲ ಖರೀದಿ ವಿಷಯದಲ್ಲಿ ಭಾರತವು ಚೀನಾದ ಜೊತೆಗೂ ಸಂಬಂಧ ಹೊಂದಿದೆ ಎಂಬುದು ಆಘಾತಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ