ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಗ್ರಹಣ ಪ್ರಕ್ರಿಯೆ ಶುರುವಾಗಿದೆ. ರಾತ್ರಿ 9:57ರಿಂದ ಮಧ್ಯರಾತ್ರಿ 1:26ರ ವರೆಗೆ ಒಟ್ಟು ಮೂರೂವರೆ ಗಂಟೆಗಳ ಕಾಲ ನಿಧಾನವಾಗಿ ಗ್ರಹಣ ಸಂಭವಿಸಲಿದೆ.
ಇದನ್ನು ರಕ್ತಚಂದ್ರಗ್ರಹಣ, ರಾಹುಗ್ರಸ್ಥ, ಖಗ್ರಾಸ ಚಂದ್ರಗ್ರಹಣ ಅಂತಲೂ ಕರೀತಾರೆ. ಉತ್ತರ & ದಕ್ಷಿಣ ಅಮೆರಿಕ ಹೊರತು ಪಡಿಸಿ ಜಗತ್ತಿನಾದ್ಯಂತ ಅದರಲ್ಲೂ ಭಾರತದಲ್ಲಿ ಸಂಪೂರ್ಣವಾಗಿ ಗ್ರಹಣ ಗೋಚರ ಆಗುತ್ತೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೂರ್ಣ ಚಂದ್ರ ಗೋಚರ ಆಗಿದೆ.